ತಿಳಿಹಾಸ್ಯದೊಂದಿಗೆ ಮನಸೆಳೆಯುತ್ತಿದೆ “ಶಭಾಷ್ ಬಡ್ಡಿ ಮಗ್ನೆ” ಟ್ರೈಲರ್

Date:

  • ತಿಳಿಹಾಸ್ಯದೊಂದಿಗೆ ಮನಸೆಳೆಯುತ್ತಿದೆ “ಶಭಾಷ್ ಬಡ್ಡಿ ಮಗ್ನೆ” ಟ್ರೈಲರ್
  • ಫೆ. 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಪ್ರಮೋದ್ ಶೆಟ್ಟಿ ನಾಯಕತ್ವದ ಸಿನಿಮಾ
  • ಬಿ.ಎಸ್. ರಾಜಶೇಖರ್ ನಿರ್ದೇಶಿಸಿರುವ, ಚೈತ್ರಾ ಪ್ರಕಾಶ್ ನಿರ್ಮಾಣದ ಚಿತ್ರ “ಶಭಾಷ್ ಬಡ್ಡಿ ಮಗ್ನೇ”

ಸೋಂಬೇರಿ ಪೋಲಿಸ್ ಆಫೀಸರ್ ನ ಪಾತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಅಭಿನಯದ ಚಿತ್ರ “ಶಭಾಷ್ ಬಡ್ಡಿ ಮಗ್ನೇ”. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಹಾಗೂ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ತಿಳಿಹಾಸ್ಯ ಹಾಗೂ ಸಸ್ಪೆನ್ಸ್ ತೆರೆದಿಡುತ್ತಿದೆ ಚಿತ್ರದ ಟ್ರೈಲರ್. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಬಿ.ಎಸ್. ರಾಜಶೇಖರ್. ಚೈತ್ರಾ ಪ್ರಕಾಶ್ ನಿರ್ಮಾಣದ ಈ ಚಿತ್ರ ಫೆ.28 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

90 ರ ದಶಕದ ಸೋಂಬೇರಿ ಪೋಲಿಸ್ ಕತೆ

90 ರ ದಶಕದಲ್ಲಿ ನಡೆದ ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕತೆಯನ್ನು ಹೆಣೆಯಲಾಗಿದೆ. ಅಂದಿನ ಕಾಲಘಟ್ಟಕ್ಕೆ ಹೊಂದುವಂತಹಾ ಕಾಸ್ಟ್ಯೂಮ್ ಹಾಗೂ ಸೆಟ್ ಗಳನ್ನು ಚಿತ್ರದಲ್ಲಿ ಬಳಸಿಕೊಂಡು ವಿಶಿಷ್ಟವಾಗಿ ಚಿತ್ರೀಕರಣ ಮಾಡಲಾಗಿದೆ. ಮನೋರಂಜನಾತ್ಮಕ ಸಿನಿಮಾ ಇದಾಗಿದ್ದು, ವೃತ್ತಿ ಬದುಕಿಗಿಂತ ವೈಯಕ್ತಿಕ ಜೀವನದಲ್ಲೇ ಹೆಚ್ಚು ಆಸಕ್ತಿ ಹೊಂದಿರುವ ಸೋಂಬೇರಿ ಪೋಲಿಸ್ ಅಧಿಕಾರಿಯೊಬ್ಬನ ಕತೆಯೇ ಚಿತ್ರದ ಜೀವಾಳ. ಚಿತ್ರ ಹಾಸ್ಯ ಭರಿತವಾಗಿದ್ದು, ನೋಡುಗರಿಗೆ ಖಂಡಿತಾ ಮನರಂಜಕವಾಗಿರಲಿದೆ ಎಂಬುದು ಚಿತ್ರತಂಡದವರ ಅಭಿಪ್ರಾಯ.

Shabhash Baddimagne Official Trailer

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್ ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್...

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ...

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್ ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ...

Are Are Yaro Evalu Song Lyrics – Andondittu Kaala Movie

Are Are Yaro Evalu Song Details: SongAre Are Yaro...