- ಸದ್ಯದಲ್ಲೇ ಸೆಟ್ಟೇರಲಿದೆ “ಪಿನಾಕ”
- ಟೈಟಲ್ ಟೀಸರ್ ನಲ್ಲಿ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
- ನೃತ್ಯ ಸಂಯೋಜಕ-ನಿರ್ದೇಶಕ ಧನಂಜಯ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿರಲಿದೆ “ಪಿನಾಕ”
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ಮತ್ತು ಟಿಜಿ ಕೃತಿ ಪ್ರಸಾದ್ ನಿರ್ಮಿಸುತ್ತಿರುವ ಚಿತ್ರ “ಪಿನಾಕ”. Pinaka Movie ಇದಕ್ಕೆ ನೃತ್ಯ ಸಂಯೋಜಕ, ನಿರ್ದೇಶಕ ಧನಂಜಯ ಆಕ್ಷನ್ ಕಟ್ ಹೇಳಲಿದ್ದಾರೆ. ಯುವರ್ಸ್ ಸಿನ್ಸಿಯರ್ಲಿ ರಾಮ್ ಚಿತ್ರದ ಬಳಿಕ ಪಿನಾಕ ಚಿತ್ರಕ್ಕೆ ಒಪ್ಪಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಗೆ ಜೋಡಿಯಾಗಿ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಯನ್ ಸಾರಿಕಾ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದು ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಚಿತ್ರತಂಡದ್ದು.
ಸಂಚಲನ ಮೂಡಿಸಿದೆ ಟೈಟಲ್ ಟೀಸರ್
” ಪಿನಾಕ” ಚಿತ್ರದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ. Golden Star Ganesh ಗಣೇಶ್ ರವರ ವಿಭಿನ್ನ, ವಿಶಿಷ್ಟ ಲುಕ್ ಈಗಾಗ್ಲೇ ಸಿನಿಪ್ರೇಮಿಗಳ ಮನಸೆಳೆಯುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರ ಗಣೇಶ್ ರವರ ಬೇರೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಈ ಚಿತ್ರಕ್ಕೆ ಹರಿ ಕೆ ವೇದಾಂತಮ್ ಅವರ ಛಾಯಾಗ್ರಹಣ ಮತ್ತು ಸಂತೋಷ್ ಪಾಂಚಾಲ್ ಅವರ ಕಲಾ ನಿರ್ದೇಶನವಿದೆ. ಇನ್ನುಳಿದಂತೆ ಪಾತ್ರವರ್ಗ ಮತ್ತು ತಾಂತ್ರಿಕ ತಂಡದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.