ಶತಕದತ್ತ ಧಾಪುಗಾಲಿಡುತ್ತಿದೆ ಸೈಕಾಲಾಜಿಕಲ್ ಥ್ರಿಲ್ಲರ್ ಮೂವೀ “ಟೆಡ್ಡಿ ಬೇರ್”

Date:

  • ಶತಕದತ್ತ ಧಾಪುಗಾಲಿಡುತ್ತಿದೆ ಸೈಕಾಲಾಜಿಕಲ್ ಥ್ರಿಲ್ಲರ್ ಮೂವೀ “ಟೆಡ್ಡಿ ಬೇರ್”
  • ನಾಯಕ ನಟ ಸುಪ್ರೀಂ ಸ್ಟಾರ್ ಭಾರ್ಗವ್ ನಟನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
  • 50 ದಿನಗಳನ್ನು ಪೂರೈಸಿ ಶತಕದತ್ತ ಹೆಜ್ಜೆ ಇಡುತ್ತಿರುವ ಸಂಭ್ರದಲ್ಲಿದೆ ಚಿತ್ರತಂಡ.

ಇದು ಸ್ಫರ್ಧಾತ್ಮಕ ಯುಗ. ಪ್ರತಿ ವಾರವೂ ಐದರಿಂದ ಹತ್ತು ಸಿನಿಮಾಗಳು ಕನ್ನಡವೊಂದರಲ್ಲೇ ಬಿಡುಗಡೆಯಾಗುತ್ತಿದ್ದರೂ ಬೆಳ್ಳಿತೆರೆಯಲ್ಲಿ ಮಿಂಚುವುದು ಕೇವಲ ಕೆಲವೇ ಸಿನಿಮಾಗಳು. ಒಟಿಟಿ ಗಳ ಈ ಕಾಲದಲ್ಲಿ ಒಂದು ವಾರ ಥಿಯೇಟರ್ ನಲ್ಲಿ ಮೂವೀ ಓಡಿದ್ರೆ ಅದೇ ದೊಡ್ಡ ಸಂಗತಿ. ಇಂತಹಾ ಸಂದರ್ಭದಲ್ಲಿ ಯುವ ಪ್ರತಿಭೆಗಳ ವಿಶಿಷ್ಟ ವಸ್ತು ವಿಷಯದ ಜನವರಿ ತಿಂಗಳಲ್ಲಿ ಬಿಡುಗಡೆಯಾದ ಚಿತ್ರ “ಟೆಡ್ಡಿ ಬೇರ್” Teddy Bear Kannada Movie ಹಲವು ಥಿಯೇಟರ್ಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿ, ಶತಕದತ್ತ ಧಾಪುಗಾಲಿಡುತ್ತಿರುವುದು ಸಂಭ್ರಮದ ವಿಚಾರ.

ಜನರ ಮನಗೆಲ್ತಿದೆ ಸೈಕಾಲಾಜಿಕಲ್ ಮೂವೀ

ಸೈಕಾಲಾಜಿಕಲ್ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಮೂರು ಭಾಗಗಳಲ್ಲಿ ಬರಲಿದ್ದು, ಈಗ ರಿಲೀಸ್ ಆಗಿ ಸೌಂಡ್ ಮಾಡುತ್ತಿರುವುದು ಮಧ್ಯದ ಕಥೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಿಕ್ವೆಲ್, ಸೀಕ್ವಲ್ ಬರಲಿದೆ. ಚಿತ್ರದ ನಾಯಕನಾಗಿ ನಟಿಸಿರುವ ಸುಪ್ರಿಂ ಸ್ಟಾರ್ ಭಾರ್ಗವ್ ಅವರು ಇಲ್ಲಿ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನೆಯಿಂದ ಸಿನಿ ಪ್ರೇಮಿಗಳ ಹೃದಯ ಗೆಲ್ತಿದ್ದಾರೆ. ಇವರು ಈಗಾಗಲೇ 7 ಸಿನಿಮಾಗಳಲ್ಲಿ ನಟಿಸುತ್ತಿದ್ದು, ಚಿತ್ರದ ಯಶಸ್ಸಿನ ನಂತರ ಇನ್ನೂ ಮೂರು ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ. ಭಗವದ್ಗೀತೆಯನ್ನೂ ಓದಿಕೊಂಡು, ಅಧ್ಯಾತ್ಮ ಮತ್ತು ವಿಜ್ಞಾನ ಇವುಗಳೆರಡನ್ನೂ ಬ್ಯಾಲನ್ಸ್ ಮಾಡುವುದೇ ಈ ಚಿತ್ರದ ಜೀವಾಳ.

ಹೈಲೈಟ್ ಆಗ್ತಿದೆ ಭೈರವೇಶ್ವರ ಸ್ವಾಮಿಯ ಹಾಡು

ಲೋಕೇಶ್ ಬಿ. ಕಥೆ, ಚಿತ್ರಕಥೆ ಬರೆದು ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಆದ್ಯಲಕ್ಷ್ಮಿ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿ ತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಚಿತ್ರದ ನಾಯಕಿಯರಾಗಿ ಶೈಲಜ ಸಿಂಹ, ದೀನ ಪೂಜಾರಿ ನಟಿಸಿದ್ದಾರೆ. ಉಳಿದಂತೆ ಸ್ವರ್ಶ ರೇಖಾ, ದಿಶಾ ಪೂವಯ್ಯ, ಕಿಟ್ಟಿ ತಾಳಿಕೋಟೆ, ಮುತ್ತು, ಅರವಿಂದ್, ಬೇಬಿ ಅಕ್ಷರ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಿವೇಕ್ ಜಂಗ್ಲಿ ಸಂಗೀತ, ದೀಪು-ಬೆನಕರಾಜ್ ಛಾಯಾಗ್ರಹಣ, ಸಂತೋಷ್ ಸಂಕಲನ, ಸ್ಟಂಟ್ ಶಿವ-ಗಣೇಶ್-ಚನ್ನಕೃಷ್ಣ ಸಾಹಸವಿದೆ. ಚಿತ್ರದ ಕೊನೆಯಲ್ಲಿ ಬರುವ ಕಾಲ ಭೈರವೇಶ್ವರ ಸ್ವಾಮಿಯ ಹಾಡು ಚಿತ್ರದಲ್ಲಿ ಹೈಲೈಟ್ ಆಗ್ತಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...