ಸೆಟ್ಟೇರಲಿದೆ ನೈಜ ಕಥೆ ಆಧಾರಿತ ಸಿನಿಮಾ “ಚಿ.ಸೌಜನ್ಯ”

Date:

  • ಸೆಟ್ಟೇರಲಿದೆ ನೈಜ ಕಥೆ ಆಧಾರಿತ ಸಿನಿಮಾ “ಚಿ.ಸೌಜನ್ಯ”
  • ನಟನೆ ಹಾಗೂ ಸಾಮಾಜಿಕ ಕಾರ್ಯಗಳಿಂದ ತಮ್ಮನ್ನು ಗುರುತಿಸಿಕೊಂಡಿರುವ ಹರ್ಷಿಕಾ ಪೂಣಚ್ಚ ನಿರ್ದೇಶನದ ಸಿನಿಮಾ
  • “ಒಂದು ಹೆಣ್ಣಿನ ಕಥೆ” ಎಂಬ ಅಡಿಬರಹದೊಂದಿಗೆ ಬರಲಿದೆ “ಚಿ.ಸೌಜನ್ಯ” ಮೂವೀ

ಕಂಸಾಳೆ ಫಿಲಂಸ್ Kamsale Films ಹಾಗೂ ಭುವನ್ ಎಂಟರ್ಟೈನ್ಮೆಂಟ್ Bhuvan Entertinment ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಬಹುಭಾಷಾ ನಟ ಕಿಶೋರ್ Kishor ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಚಿ. ಸೌಜನ್ಯ” Chi.Sowjanya ಚಿತ್ರದ ಶೀರ್ಷಿಕೆ ಅನಾವರಣ ನಡೆದಿದ್ದು ಟೈಟಲ್ ಪೋಸ್ಟರ್ ಲಾಂಚ್ ಆಗಿದೆ. ಅಭಿನಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ Harshika Poonaccha ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಏನ್ ಹೇಳತ್ತೆ ಟೈಟಲ್ ಪೋಸ್ಟರ್?

“ಒಂದು ಹೆಣ್ಣಿನ ಕಥೆ” ಎಂಬ ಅಡಿಬರಹ ಹೊಂದಿರುವ ಈ ಚಿತ್ರ ದೇಶದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣುಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ಕಥಾಹಂದರ ಹೊಂದಿರಲಿದೆ. ಬಿಡುಗಡೆಯಾಗಿರುವ ಪೋಸ್ಟರ್ ಅನ್ನು ನಾವು ಸೂಕ್ಷ್ಮಾಗಿ ಗಮನಿಸಿದ್ರೆ ಅದರಲ್ಲಿ ಬಾಲಕಿಯೊಬ್ಬಳು ಭಯದಿಂದ ಕೂಗುತ್ತಾ ನಿಂತಿದ್ದಾಳೆ. ಆಕೆಯ ಮುಖ ಗಾಯಗಳಿಂದ ಕೂಡಿದ್ದು, ಅಲ್ಲಲ್ಲಿ ರಕ್ತವಿದೆ. ಹಿಂದೆ ಒಂದಷ್ಟು ಪುರುಷರು ದಾಳಿ ಮಾಡುವವರಂತೆ ನಿಂತಿದ್ದಾರೆ. ಇನ್ನು ಈ ಚಿತ್ರದಲ್ಲಿ ದೇವಸ್ಥಾನದ ಕಳಶ ಇದೆ. ಒಂದಷ್ಟು ಮಂದಿ ತುಟಿಯ ಮೇಲೆ ಕೈ ಬೆರಳು ಇಟ್ಟು ಸುಮ್ಮನಿರುವಂತೆ ಸೂಚಿಸುತ್ತಿದ್ದಾರೆ.

ತಯಾರಿಯಲ್ಲಿ ತೊಡಗಿದೆ ಚಿತ್ರತಂಡ

ಸೌಜನ್ಯ ಪ್ರಕರಣದ ಬಗ್ಗೆ ಬಿಸಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹರ್ಷಿಕಾ ಈ ಸಿನಿಮಾ ಟೈಟಲ್ ಅನೌನ್ಸ್ ಮಾಡಿರೋದು ಹಾಗೂ ಇದು ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಎಂದಿರೋದು ಕುತೂಹಲ ಮೂಡಿಸಿದೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ನಡೆಯಲಿದೆ. ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು Ugram Manju, ಕಾಕ್ರೊಚ್ ಸುದೀ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...