ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ

Date:

ಇತ್ತೀಚೆಗಷ್ಟೇ ಟಾಲಿವುಡ್ ನ ಜೈ ಹನುಮಾನ್ ( Jai Hanuman )ಚಿತ್ರಕ್ಕೆ ಸಹಿ ಹಾಕಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ( Rishab Shetty ) ಇದೀಗ ಬಾಲಿವುಡ್ ಮೂವಿಯೊಂದರ ಪೋಸ್ಟರ್ ರಿಲೀಸ್ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.

ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಸಂದೀಪ್ ( Sandeep ) ಅವ್ರ ಮಹತ್ವಾಕಾಂಕ್ಷಿ ಸಿನೆಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಆಗಿ ಮಿಂಚಲಿದ್ದಾರೆ ರಿಷಭ್. ಈ ಐತಿಹಾಸಿಕ ಸಿನೆಮಾದ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹೊರಬಂದಿದ್ದು ಖಡ್ಗ ಹಿಡಿದ ಶಿವಾಜಿ ಮಹರಾಜರ ಲುಕ್ ನಲ್ಲಿ ರಿಷಭ್ ಕಾಣಿಸಿಕೊಂಡಿದ್ದಾರೆ. ಇದು ಸಿನಿಪ್ರಿಯರೆಲ್ಲರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಇದೊಂದು ಬಯೋಪಿಕ್ ಚಲನಚಿತ್ರವಾಗಿದ್ದು, 2027 ರ ಜನವರಿ 21 ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಾವರ್ಕರ್, ಮೇರಿ ಕೋಮ್, ಬಾಜಿರಾವ್ ಮಸ್ತಾನಿ, ಸರಬ್ಜಿತ್, ರಾಮ್​ಲೀಲಾ ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಡೈರೆಕ್ಟ್ರ್ ಸಂದೀಪ್ ಹಾಗೂ ರಿಷಭ್ ಜೋಡಿಯ ಚಿತ್ರ ಹೇಗಿರಬಹುದೆಂಬ ಊಹೆ ಮಾಡಲು ಕಷ್ಟವಿದ್ದು, ಉತ್ತರ ಸಿಗಲು ಇನ್ನೂ ಮೂರು ವರ್ಷ ಕಾಯಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ”

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ” ತುಳು...

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್”

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್" ಶರತ್ ರಾಯ್ಸದ್ ನಿರ್ದೇಶನದಲ್ಲಿ ಮೂಡಿಬಂದಿದೆ ಅದ್ಭುತ ಕಿರುಚಿತ್ರ ನೋಡುಗರನ್ನು...

ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ” ಚಿತ್ರದ “ಕಾಲ ಕೆಟ್ಟೈತಂತ” ಹಾಡು

ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ" ಚಿತ್ರದ “ಕಾಲ ಕೆಟ್ಟೈತಂತ" ಹಾಡು ಹಿಟ್...

ನೈಜ ಕಥೆ ಆಧಾರಿತ ರೋಚಕ ಸಿನಿಮಾ “ಜಾಕಿ 42”

ನೈಜ ಕಥೆ ಆಧಾರಿತ ರೋಚಕ ಸಿನಿಮಾ “ಜಾಕಿ 42” ನಿರ್ದೇಶಕ ಗುರುತೇಜ್ ಶೆಟ್ಟಿ...