ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

Date:

  • ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”
  • ಬಸವರಾಜ ನಂದಿ ನಿರ್ಮಾಣ, ಸುಧಾ ಅಣ್ಣಾಶೇಠ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದೆ.
  • ವಿಶ್ವಪ್ರಕಾಶ ಟಿ ಮಲಗೊಂಡ ನಾಯಕನಾಗಿ, ಸಿರಿ ವೆಂಕಟೇಶ್ ನಾಯಕಿಯಾಗಿ ನಟಿಸಿದ ಚಿತ್ರದ ಪೋಸ್ಟರ್ ರಿಲೀಸ್

ಹೊಸ ವರ್ಷದ ಸಂಭ್ರಮಕ್ಕೆ ಹೊಸ ಪ್ರತಿಭೆಗಳ ತಂಡವೊಂದು “ಪ್ರೇಮ್ ಲವ್ ನಂದಿನಿ” ಚಿತ್ರದ ಚಿತ್ರೀಕರಣ ಮುಗಿಸಿ, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ ಅವರ ನಿರ್ಮಾಣ ಚಿಯ್ರಕ್ಕಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಸುಧಾ ಅಣ್ಣಾಶೇಠ. ವಿಶ್ವಪ್ರಕಾಶ ಟಿ ಮಲಗೊಂಡ ನಾಯಕ, ಸಿರಿ ವೆಂಕಟೇಶ್ ನಾಯಕಿಯಾಗಿ ಮಿಂಚಿದ್ದಾರೆ.

ಪ್ರಸ್ತುತ ಸಮಾಜದ ವಾಸ್ತವತೆ ಬಿಂಬಿಸುವ ಚಿತ್ರ

ಇತ್ತೀಚೆಗೆ ನಡೆಯುತ್ತಿರುವ ಪ್ರೇಮ ಕಥೆಯಿಂದ ಶುರುವಾಗಿ ಡೈವೋರ್ಸ್ ವರೆಗೆ ನಡೆಯುವ ಕಥೆಯೇ ಈ ಚಿತ್ರದ ಸಾರಾಂಶ. ಹೊಸ ಕಥೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಚಿತ್ರ ಇದು. ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್, ಮಧು ಅರಕೆರೆ ಸಹ ಕಲಾವಿದರಾಗಿ ಅಭಿನಯಿಸಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಪ್ಲಾನಿಂಗ್ ನಲ್ಲಿದೆ ಚಿತ್ರತಂಡ.

ಚಿತ್ರತಂಡದಲ್ಲಿ ಅನುಭವಿ ಕಲಾವಿದರು

ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಕ್ಯಾಮೆರಾ ಕೈಚಳಕವಿದ್ದು, ಪ್ರಜ್ವಲ್ ನಂದಿ ಅವರ ಕ್ರಿಯೇಟಿವ್ ಸಂಕಲನವಿದೆ. ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ ಕಾರ್ಯ ನಿರ್ವಹಿಸಿದ್ದು, ಪ್ರಸಾದ ತೋಟದ ಅವರ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವಿರೇಶ್ ಹಂಡಗಿ, ಹರೀಶ್ ಅರಸು ಅವರ ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ ಜವಾಬ್ದಾರಿ ಹೊತ್ತಿದ್ದು, ನಿಂಗರಾಜ ಕಟ್ಟಿಗೇರಿ ಹೀಗೆ ಅನೇಕರು ತಂತ್ರಜ್ಞಾನದಲ್ಲಿ ಕೈಜೋಡಿಸಿದ್ದಾರೆ. ಒಂದೊಳ್ಳೆ ಚಿತ್ರ ಸಿನಿಪ್ರಿಯರಿಗೆ ನೀಡುವ ಉತ್ಸಾಹದಲ್ಲಿದೆ ಚಿತ್ರತಂಡ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’ ಭಾರತೀಯ...