- ತೆರೆಗೆ ಬರುತ್ತಿದೆ ರೊಮ್ಯಾಂಟಿಕ್ ಕಥೆ “ಭಾವ ತೀರ ಯಾನ”
- ನಿರ್ದೇಶಕರಾಗಿ ಹೊಸಹೆಜ್ಜೆ ಇಟ್ಟಿದ್ದಾರೆ ಮಯೂರ್ ಅಂಬೆಗಲ್ಲು
- ಫೆಬ್ರವರಿ 21 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ ಭಾವ ತೀರ ಯಾನ
ವಿಭಿನ್ನ ಶೈಲಿಯ ಮೂಲಕ ಇತ್ತೀಚೆಗೆ ಪ್ರಸಿದ್ಧವಾಗಿದ್ದ ಬ್ಲಿಂಕ್ ಹಾಗೂ ಶಾಖಾಹಾರಿ ಚಿತ್ರಗಳ ನಿರ್ಮಾಪಕರ ಸಾಥ್ ನಿಂದ ತಯಾರಾದ ಚಿತ್ರ “ಭಾವ ತೀರ ಯಾನ” Bhava theera yaana. ಶಾಖಾಹಾರಿ ಸಿನಿಮಾದ ಸಂಗೀತ ನಿರ್ದೇಶನ ಮಾಡಿದ್ದ ಮಯೂರ್ ಅಂಬೆಗಲ್ಲು Mayur Ambegallu ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊಸ ಹೆಜ್ಜೆ ಇರಿಸಿದ್ದಾರೆ. ಇವರೊಂದಿಗೆ ತೇಜಸ್ ಕಿರಣ್ Thejas Kiran ಕೂಡಾ ಕೈ ಜೋಡಿಸಿದ್ದಾರೆ. ಬ್ಲಿಂಕ್ ಸಿನಿಮಾದ ನಿರ್ಮಾಪಕ ರವಿಚಂದ್ರ ಅವರು ಈ ಸಿನಿಮಾದ ವಿತರಣೆ ಹಕ್ಕು ಪಡೆದುಕೊಂಡು, ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ. ಹಾಗೇ, ಶಾಖಾಹಾರಿ ಸಿನಿಮಾ ನಿರ್ಮಾಪಕರಾದ ರಾಜೇಶ್ ಕೀಲಾಂಬಿ ಹಾಗೂ ರಂಜನಿ ಪ್ರಸನ್ನ ಅವರು ಸಿನಿಮಾವನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ.

ಎ.ಆರ್. ಮಣಿಕಾಂತ್ ಅವರಿಂದ ಪಡೆಯಲಾದ ಶೀರ್ಷಿಕೆ
ಈಗಾಗಲೇ ಬಹಳ ಫೇಮಸ್ ಆದ ಕನ್ನಡದ ಅಂಕಣ ಎ.ಆರ್. ಮಣಿಕಾಂತ್ ಅವರ ಭಾವ ತೀರ ಯಾನ ಹೆಸರನ್ನು ಅವರಿಂದ ಪಡೆದುಕೊಂಡು ಸಿನಿಮಾ ಶೀರ್ಷಿಕೆ ಇರಿಸಲಾಗಿದೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಸಿನಿಮಾದ ನಿರ್ದೇಶಕ ತೇಜಸ್ ಕಿರಣ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಆರೋಹಿ ನೈನಾ-ಅನುಷಾ ಕೃಷ್ಣ ನಾಯಕಿಯರು. ಇನ್ನುಳಿದಂತೆ ಕಿರುತೆರೆ ಕಲಾವಿದೆ ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ ಮತ್ತಿತರರು ಸಿನಿಮಾದಲ್ಲಿ ಇದ್ದಾರೆ. ರಮೇಶ್ ಭಟ್ ಅವರು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.
ವಿಶಾಖ ನಾಗಲಾಪುರ ಸಂಭಾಷಣೆ ಬರೆದಿದ್ದು, ಶಿವಶಂಕರ ನೂರಂಬಡ ಅವರ ಡಿಒಪಿ ಚಿತ್ರಕ್ಕಿದೆ.ಇಡೀ ಕುಟುಂಬ ಕುಳಿತು ನೋಡುವಂತಹ ಭಾವ ತೀರ ಯಾನ ಸಿನಿಮಾ ಫೆಬ್ರವರಿ 21ಕ್ಕೆ ರಿಲೀಸ್ ಆಗಲಿದೆ.