- ಓಟಿಟಿಯಲ್ಲಿ ಸಿನಿ ರಸಿಕರಿಗೆ ವಾರಾಂತ್ಯ ಹಬ್ಬ: ಅಬ್ಬರಿಸಿತು ಈ ಮೂರು ಚಿತ್ರಗಳು
- ವಾರಾಂತ್ಯದಲ್ಲೂ ಓಟಿಟಿಯಲ್ಲಿ ಸಿನಿಮಾಗಳನ್ನು ನೋಡಬಯಸುವವರಿಗೆ ಹಬ್ಬದ ವಾತಾವರಣ.
- ಓಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು
ಒಂದೆಡೆ ಚಿತ್ರಮಂದಿರಗಳಲ್ಲಿ ಕನ್ನಡದ “ಸು ಫ್ರಂ ಸೋ” Su from So “ಕೊತ್ತಲವಾಡಿ” Kottalavadi “ಮಹಾವತಾರ ನರಸಿಂಹ” Mahavathara Narasimha ಚಿತ್ರಗಳು ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಇದೀಗ ವಾರಾಂತ್ಯದಲ್ಲೂ ಓಟಿಟಿಯಲ್ಲಿ ಸಿನಿಮಾಗಳನ್ನು ನೋಡಬಯಸುವವರಿಗೆ ಹಬ್ಬದ ವಾತಾವರಣ. ಹೌದು ಓಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು ಬರುತ್ತಿದೆ. ಹಾಗಾದ್ರೆ ಬನ್ನಿ ಆ ಮೂರು ಚಿತ್ರಗಳು ಯಾವುದು ನೋಡೋಣ.
“ಪೋಟೋ” Photo
ಕೂಲಿ ಕೆಲಸ ಮಾಡಲು ಬೇರೆ ಬೇರೆ ನಗರಗಳಿಗೆ ತೆರಳಿದ್ದ ಕಾರ್ಮಿಕರು ಪುನಃ ತಮ್ಮ ಊರು ಸೇರಲು ಪಡುವ ಕಷ್ಟಗಳು ಒಂದೆರಡಲ್ಲ. ನಡುರಸ್ತೆಯಲ್ಲೇ ಪ್ರಾಣ ಬಿಟ್ಟವರೂ ಇದ್ದಾರೆ. ಅಂಥ ಕೋರೋನ ಲಾಕ್ ಡೌನ್ ಕಾಲದ ಕರಾಳ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಸಿನಿಮಾ “ಫೋಟೋ ” ವಿಭಿನ್ನ ಕಥನವನ್ನು ಒಳಗೊಂಡಿದೆ. ಉತ್ಸವ ಗೋನ್ವಾರ್ Utsav Gonwar ನಿರ್ದೇಶನದ ಚಿತ್ರವಿದು. ಇದೀಗ ಪ್ರೈಂ ವಿಡಿಯೋದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ರೂ.99 ಪಾವತಿಸಿ ಈ ಸಿನಿಮಾ ನೋಡಬಹುದು.
“ಹೆಬ್ಬುಲಿ ಕಟ್” Hebbuli Cut
ಹೈಸ್ಕೂಲ್ ಓದುತ್ತಿರುವ ಬಾಲಕನೊಬ್ಬನಿಗೆ ತನ್ನ ಹೇರ್ ಸ್ಟೈಲ್ ಬಗ್ಗೆ ಅಪಾರ ಪ್ರೀತಿ ಇರುತ್ತೆ. ಆತ ನಟ ಸುದೀಪ್ ಹೇರ್ ಸ್ಟೈಲ್ ಹೇಗೆ ಫಾಲೋ ಮಾಡುತ್ತಾನೆ ಅನ್ನೋದು ಈ ಕಥೆಯ ಜೀವಾಳ. ಚಿತ್ರದಲ್ಲಿ ಆಧುನಿಕ ಸಮಾಜದ ಅಂಕುಡೊಂಕಗಳನ್ನ ಕೂಡ ತೋರಿಸಲಾಗಿದೆ. ಇದೊಂದು ಅತ್ಯುತ್ತಮ ಸಿನಿಮಾ ಆಗಿದೆ. ಭೀಮರಾವ್ Bheemarao ನಿರ್ದೇಶನದ ಚಿತ್ರವಿದು. ಸನ್ ನೆಕ್ಸ್ಟ್ Sunnext ಓಟಿಟಿ OTT ಯಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು ಆಸಕ್ತರು ನೋಡಬಹುದು.
“ತಿಮ್ಮನ ಮೊಟ್ಟೆಗಳು” Thimmana Mottegalu
ಮನುಷ್ಯ, ಪ್ರಕೃತಿ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಸುತ್ತ ಹೆಣೆಯಲಾಗಿರೋ ಸಿನಿಮಾ “ತಿಮ್ಮನ ಮೊಟ್ಟೆಗಳು”. ಈ ಸಿನಿಮಾ ಪಶ್ಚಿಮಘಟ್ಟದ ಊರುಗಳಲ್ಲಿ ವಾಸಿಸುವ ಜನರ ಮೌಲ್ಯಗಳು, ಸರಳತೆ ಮತ್ತು ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಮಲೆನಾಡಿನ ಸುಂದದರವಾದ ಪ್ರಕೃತಿ ಇಲ್ಲಿ ಮೂಡಿಬಂದಿದೆ. ರಕ್ಷಿತ್ ತೀರ್ಥಹಳ್ಳಿ Rakshith Thirthahalli ನಿರ್ದೇಶನದ ಚಿತ್ರವಿದು. ಪ್ರೈಂ ವಿಡಿಯೋದಲ್ಲಿ ಈ ಚಿತ್ರವನ್ನು ನೋಡಿ ಆನಂದಿಸಬಹುದು.