- ಬಿಡುಗಡೆಯಾಯ್ತು ಆಕ್ಷನ್-ಪ್ಯಾಕ್ಡ್ “ಆಲ್ಫಾ ಮೆನ್ ಲವ್ ವೈಲೆನ್ಸ್” ಚಿತ್ರದ ಫಸ್ಟ್ ಲುಕ್
- ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಹೇಮಂತ್ ಕುಮಾರ್.
- ಗೀತಾ, ಹೊಯ್ಸಳ ಚಿತ್ರಗಳ ನಿರ್ದೇಶಕ ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ‘ಆಲ್ಫಾ’
LA ಬ್ಯಾನರ್ ಅಡಿಯಲ್ಲಿ ತಮ್ಮ ಚೊಚ್ಚಲ ಚಿತ್ರ “ಆಲ್ಫಾ” Alfa ವನ್ನು ನಿರ್ಮಿಸಿದ್ದಾರೆ, ಆನಂದ್ ಕುಮಾರ್. “ಮೆನ್ ಲವ್ ವಯಲೆನ್ಸ್” A Tale Of The Most Violent Men ಎಂಬ ಆಸಕ್ತಿದಾಯಕ ಟ್ಯಾಗ್ಲೈನ್ ಹೊಂದಿರುವ ಆಕ್ಷನ್-ಪ್ಯಾಕ್ಡ್ ಚಿತ್ರ “ಆಲ್ಫಾ”ದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಇದರಲ್ಲಿ ಕೇವಲ ಆ್ಯಕ್ಷನ್ ಮಾತ್ರವಲ್ಲದೇ ಆಳವಾದ ಭಾವನಾತ್ಮಕ ಕ್ಷಣಗಳನ್ನು ಹೊಂದಿದೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಒಳಗೊಂಡ ಕಥೆಯನ್ನು ನಿರ್ದೇಶಿಸುತ್ತಿದ್ದಾರೆ ನಿರ್ದೇಶಕ ವಿಜಯ್ ಎನ್.
ಮಾಸ್ ಲುಕ್ ನಲ್ಲಿ ನಾಯಕ ಹೇಮಂತ್ ಕುಮಾರ್
ಚಿತ್ರವು ತಂದೆ ಮಗನ ಬಾಂಧವ್ಯದ ಕತೆಯೊಂದಿಗೆ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಕ್ರೈಂ ಸ್ಟೋರಿ ಸುತ್ತ ಸುತ್ತುತ್ತದೆ. ಕಥೆಯಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ಅವುಗಳ ಸಂಕೇತವಾಗಿ ‘ಆಲ್ಫಾ’ ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ. ಇದರ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಾಯಕ ಹೇಮಂತ್ Hemanth ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈ ಚಿತ್ರದಲ್ಲಿ ತಮ್ಮ ನಟನೆಗಾಗಿ ನಿರ್ದೇಶಕ ಮತ್ತು ನಟ ರಘು ಶಿವಮೊಗ್ಗ Raghu Shivamogga ಅವರಲ್ಲಿ ತರಬೇತಿ ಪಡೆದಿದ್ದಾರೆ. ಸಾಹಸ ದೃಶ್ಯಗಳನ್ನು ಅರ್ಜುನ್ ಕಲಿಸಿದ್ದಾರೆ. ಈ ಚಿತ್ರಕ್ಕಾಗಿಯೇ ಅವರು ವಿಶೇಷವಾಗಿ ಕಠಿಣ ಸಮರ ಕಲೆಗಳ ಅಭ್ಯಾಸವನ್ನೂ ಮಾಡಿರುತ್ತಾರೆ.
ಚಿತ್ರಕ್ಕೆ ಕಾರ್ತಿಕ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಮಾಸ್ತಿ ಅವರು ಸಂಭಾಷಣೆ ಇದ್ದು, ಚಿತ್ರೀಕರಣ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭಿಸುವ ಯೋಜನೆ ಚಿತ್ರತಂಡಕ್ಕಿದೆ.