ಈ ವಾರ ತೆರೆಯ ಮೇಲೆ ಬರಲಿದೆ ಅಡ್ವೆಂಚರ್, ಕಾಮಿಡಿ ಮೂವೀ “ಫಾರೆಸ್ಟ್”

Date:

  • ಈ ವಾರ ತೆರೆಯ ಮೇಲೆ ಬರಲಿದೆ ಅಡ್ವೆಂಚರ್, ಕಾಮಿಡಿ ಮೂವೀ “ಫಾರೆಸ್ಟ್”
  • ಕಾಡಿಗೆ ಹೋಗುವ ಅಮಾಯಕ ಹಳ್ಳಿಗರ ವಿಶಿಷ್ಟ ಕತೆ ಫಾರೆಸ್ಟ್
  • ಚಂದ್ರಮೋಹನ್ ನಿರ್ದೇಶನದ ಚಿತ್ರ ಜ.24 ರಂದು ತೆರೆಗೆ

ಕಾಡನ್ನು ಕಾಡಿಸುವ ಕಾಡಿನೊಳಗೇ ನಡೆಯುವ ಕತೆಯ ಹಂದರ ಹೊಂದಿರುವ ಚಿತ್ರ “ಫಾರೆಸ್ಟ್”. Forest Kannada Movie ಆಕ್ಷನ್, ಅಡ್ವೆಂಚರ್, ಕಾಮಿಡಿ, ಥ್ರಿಲ್ಲರ್ ಮೂವೀ ಎಲ್ಲಾ ವಿಧದ ಪ್ರೇಕ್ಷಕರನ್ನು ಸೆಳೆಯಬಲ್ಲ ಗುಣ ಹೊಂದಿದೆ. ಮೊದಲ ಬಾರಿಗೆ ಎನ್.ಎಂ. ಕಾಂತರಾಜ್ ಅವರು ‘ಎನ್.ಎಂ.ಕೆ. ಸಿನಿಮಾಸ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಂದ್ರ ಮೋಹನ್ ಅವರ ನಿರ್ದೇಶನ ಚಿತ್ರಕ್ಕಿದ್ದು, ಈ ಚಿತ್ರದಲ್ಲಿ ಒಬ್ಬನೇ ಹೀರೋ ಎಂಬ ಕಾನ್ಸೆಪ್ಟ್ ಇಲ್ಲ. ಅನೀಶ್ ತೇಜೇಶ್ವರ್, ಚಿಕ್ಕಣ್ಣ, ರಂಗಾಯಣ ರಘು, ಗುರುನಂದನ್, ಅರ್ಚನಾ ಕೊಟ್ಟಿಗೆ ಇವರೆಲ್ಲರೂ ಸಿನಿಮಾದ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.

ಕಾಡನ್ನೇ ನಡುಗಿಸುವ ಟ್ರೈಲರ್

ಇತ್ತೀಚೆಗಷ್ಟೇ ಇದರ ಟ್ರೈಲರ್ ಬಿಡುಗಡೆಯಾಗಿದ್ದು, ಆನೆಯ ದೃಶ್ಯದಿಂದಲೇ ಆರಂಭವಾಗು ಟ್ರೈಲರ್ ಬಹುತೇಕ ಕಾಡಿನೊಳಗಿನ ಸೀನ್ ಗಳನ್ನೇ ಒಳಗೊಂಡಿದೆ. ಕಾಮಿಡಿ, ಥ್ರಿಲ್ಲರ್ ಈ ಎಲ್ಲಾ ಅಂಶಗಳೂ ಎದ್ದು ಕಾಣುತ್ತಿವೆ. ಉಸಿರು ಬಿಗಿ ಹಿಡಿದುಕೊಂಡು ಮುಂದಿನ ದೃಶ್ಯವೇನಾಯ್ತೆಂದು ನೋಡುವಂತಿದೆ. ಇನ್ನು ಚಿತ್ರ ಇನ್ನೆಷ್ಟು ಥ್ರಿಲ್ಲಿಂಗ್ ಆಗಿರಬಹುದು ಎಂಬ ಕುತೂಹಲ ಸಹಜವಾಗಿಯೇ ಸಿನಿಪ್ರೇಕ್ಷಕರ ಮನದಲ್ಲಿ ಎದ್ದಿದೆ. ಇದಕ್ಕೆ ಉತ್ತರ ಜನವರಿ 24 ರಂದು ಸಿಗಲಿಕ್ಕಿದೆ. ಇತ್ತೀಚೆಗೆ ನಡೆದ ಸಿನಿಮಾ ಪ್ರಿ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ನಟ ರಂಗಾಯಣ ರಘು “ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆ ಅಲ್ಲ. ಕಾಡಿನಲ್ಲಿ ಇರುವುದನ್ನು ಹುಡುಕುವ ಕಥೆ, ಇದರಲ್ಲಿ ನನ್ನದು ಮಂತ್ರವಾದಿಯ ಪಾತ್ರ” ಎಂದರು. “ಹಳ್ಳಿಯಿಂದ ಕಾಡಿಗೆ ಹೋಗುವ ಅಮಾಯಕರ ಕಥೆಯಿದು” ಎಂದು ಚಿಕ್ಕಣ್ಣ ಹೇಳಿದರು.

Forest Kannada Official Trailer

ಚಿತ್ರಕ್ಕಾಗಿ ಶ್ರಮಿಸಿದೆ ಚಿತ್ರತಂಡ

ಮಡಿಕೇರಿಯ ಸಂಪಾಜೆ ಕಾಡು, ಮಲೆ ಮಹದೇಶ್ವರ ಬೆಟ್ಟ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲೂ ಚಿತ್ರೀಕರಣ ಆಗಿದೆ. ಸತ್ಯ ಶೌರ್ಯ ಸಾಗರ್ ಮತ್ತು ನಿರ್ದೇಶಕ ಚಂದ್ರಮೋಹನ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಆನಂದ್ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...