- ಜ.30 ಕ್ಕೆ ಹೊರಬರಲಿದೆ “ಅಲ್ಲೇ ಡ್ರಾ ಅಲ್ಲೇ ಬಹುಮಾನ”
- ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಶೌರ್ಯ ಹಾಗೂ ರಷಿಕಾ ರಾಜ್
- ರತ್ನತೀರ್ಥ ನಿರ್ದೇಶನದ ಚಿತ್ರವನ್ನು ಜನನಿ ಫಿಲಂಸ್ ಮೂಲಕ ಪ್ರಶಾಂತ್ ಬಿ.ಜೆ. ನಿರ್ದೇಶಿಸಿದ್ದಾರೆ.
“ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರ ತನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದು, ಇದೇ ಜ.30ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಪ್ರಜ್ವಲ್ ದೇವರಾಜ್ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ವಿಶೇಷವೆಂದರೆ ಪುನೀತ್ ರಾಜ್ ಕುಮಾರ್ ಹಾಗೂ ಉಪೇಂದ್ರ ಅವರೂ ಈ ಚಿತ್ರಕ್ಕೆ ಹಾಡಿದ್ದಾರೆ. ಜನನಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಬಿ.ಜೆ.ನಿರ್ಮಾಣದಲ್ಲಿ ಹೊರಬರುತ್ತಿರುವ ಚಿತ್ರಕ್ಕೆ ರತ್ನತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ.
ನಾಯಕಿ ಪ್ರಧಾನ ಚಿತ್ರ
ನಾವು ಮಾಡಿದ ಕರ್ಮಕ್ಕೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬ “ಇಸ್ಟಂಟ್ ಕರ್ಮ” ಥೀಮ್ ನ ಮೇಲೆ ಮಾಡಿದ ಚಿತ್ರವಿದು. ಇಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯಲ್ಲಿ ನಾಯಕಿಯೇ ಮುಖ್ಯ ಪಾತ್ರ ವಹಿಸುತ್ತಾರೆ. ರಷಿಕಾ ಅವರು ಲೀಡ್ ಮಾತ್ರ ನಿರ್ವಹಿಸಿದ್ದಾರೆ. ರಂಗಭೂಮಿಯಲ್ಲಿ ಪಳಗಿದ ಶೌರ್ಯ ಅವರು ನಾಯಕ ನಟನಾಗಿದ್ದಾರೆ. ಜ. 30 ಕ್ಕೆ ತೆರೆಗೆ ಬರಲಿರುವ ಹೊಸಬರ ತಂಡದ ಚಿತ್ರ ಬೆಳ್ಳಿತೆರೆಯಲ್ಲಿ ಮಿಂಚಲಿದೆಯೇ ಕಾದು ನೋಡಬೇಕಿದೆ.