ಅಲೋಕ್ ದುರ್ಗಾಪ್ರಸಾದ್ ಅಭಿನಯದ ‘ಕುಡ್ಲ ನಮ್ದು ಊರು’ ಆಡಿಯೋ ಮತ್ತು ಟ್ರೈಲರ್ ಲಾಂಚ್

Date:

  • ಅಲೋಕ್ ದುರ್ಗಾಪ್ರಸಾದ್ ಅಭಿನಯದ ‘ಕುಡ್ಲ ನಮ್ದು ಊರು’ ಆಡಿಯೋ ಮತ್ತು ಟ್ರೈಲರ್ ಲಾಂಚ್
  • ಮಂಗಳೂರಿನ ಯುವ ಪ್ರತಿಭೆ ಅಲೋಕ್ ದುರ್ಗಾಪ್ರಸಾದ್ ಚೊಚ್ಚಲ ಸಿನಿಮಾ
  • ತುಳುನಾಡಿನ ಕಲೆ, ಸಂಸ್ಕೃತಿ, ಆಚರಣೆಗಳ ಮೆರಗನ್ನು ಪ್ರತಿನಿಧಿಸುವ ಸಿನಿಮಾ
  • ತುಳುನಾಡಿನ ಯುವಪ್ರತಿಭೆಗಳಿಗೆ ಅವಕಾಶ

ಕೃತಾರ್ಥ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡು, ಮಂಗಳೂರಿನ ಯುವ ಪ್ರತಿಭೆ ಅಲೋಕ್ ದುರ್ಗಾಪ್ರಸಾದ್ Alok Durga Prasad ಅವರೇ ನಿರ್ದೇಶಿಸಿ, ನಾಯಕನಟನಾಗಿ ಕಾಣಿಸಿಕೊಂಡಿರುವ ಚಿತ್ರ ‘ಕುಡ್ಲ ನಮ್ದು ಊರು’. Kudla Namdu Uru movie ಇದರ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚಿಗೆ ನಡೆದಿದ್ದು, ಸದ್ಯದಲ್ಲೇ ತೆರೆಯ ಮೇಲೆ ಮಿಂಚಲು ರೆಡಿಯಾಗಿದೆ ವಿಭಿನ್ನ ಶೈಲಿಯ ಕುಡ್ಲ ನಮ್ದು ಊರು ಚಿತ್ರ.

ತುಳುನಾಡಿನ ಪರಂಪರೆ ಬಿಂಬಿಸುವ ಚಿತ್ರ

ಅಲೋಕ್ ದುರ್ಗಾ ಪ್ರಸಾದ್ ರ Alok Durga Prasad ಚೊಚ್ಚಲ ಸಿನಿಮಾ ಇದಾಗಿದ್ದು, ಈ ಸಿನಿಮಾವು ತುಳುನಾಡಿನ ಆಚಾರ-ವಿಚಾರ, ಭಾಷಾ ವೈವಿಧ್ಯತೆ, ಕಲೆ, ಸಂಸ್ಕೃತಿ, ಸಾಮರಸ್ಯ ಮುಂತಾದ ವಿಷಯಗಳ ಕುರಿತ ವಿಶಿಷ್ಟ ಕಥಾಹಂದರವನ್ನು ಒಳಗೊಂಡಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲೇ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ.

ಸ್ಥಳೀಯ ಹಾಗೂ ಬೆಳಕಿಗೆ ಬರುತ್ತಿರುವ ಉದಯೋನ್ಮುಖ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಿದ್ದು, ಯುವಪ್ರತಿಭೆಗಳಿಗೊಂದು ಪ್ರೋತ್ಸಾಹ ಕೊಟ್ಟಂತಾಗಿದೆ. ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ ವಿಶ್ವನಾಥ್ ಮತ್ತು ಮಾಜಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭಾಷಯ ಕೋರಿ, ಬೆಂಬಲ ನೀಡಿದರು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...