- ಏಪ್ರಿಲ್ 25ಕ್ಕೆ ರಿಲೀಸ್ ಆಗ್ತಿದೆ “ಅಮರ ಪ್ರೇಮಿ ಅರುಣ್” ಲವ್ ಸ್ಟೋರಿ
- ಬಳ್ಳಾರಿ ಹಿನ್ನಲೆಯ ಪ್ರೇಮಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ ಪ್ರವೀಣ್ ಕುಮಾರ್ ಜಿ
- ಹರಿಶರ್ವಾ, ದೀಪಿಕಾ ಆರಾಧ್ಯ ಜೋಡಿಯ ನಟನೆ ಈ ಚಿತ್ರಕ್ಕಿದೆ.
ಒಲವು ಸಿನಿಮಾ Olavu Cinema ಬ್ಯಾನರ್ ಅಡಿಯಲ್ಲಿ ಒಲವು ಸಿನಿಮಾ, ಒಲವು ಬಳಗ ಹಾಗೂ ಮಂಡ್ಯ ಮಂಜು Mandya Manju ನಿರ್ಮಾಣ ಮಾಡುತ್ತಿರುವ ಸಿನಿಮಾ “ಅಮರ ಪ್ರೇಮಿ ಅರುಣ್” Amara Premi Arun ಏಪ್ರಿಲ್ 25 ರಂದು ತೆರೆಯ ಮೇಲೆ ಬರಲಿದೆ. ಪ್ರವೀಣ್ ಕುಮಾರ್ ಜಿ Praveen Kumar G ಅವರ ಕಥೆ ಹಾಗೂ ನಿರ್ದೇಶನ ಇರುವ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಮರ ಪ್ರೇಮಿಗಳಾಗಿ ಮಿಂಚಿದ್ದಾರೆ ಹರಿಶರ್ವಾ Harisharva ಹಾಗೂ ದೀಪಿಕಾ ಆರಾಧ್ಯ Deepika Aradhya. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತವಿದ್ದು, ಪ್ರವೀಣ್ ಎಸ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನವಿದೆ.
ಬಳ್ಳಾರಿ ಹುಡುಗನ ಲವ್ ಸ್ಟೋರಿ
ಬಳ್ಳಾರಿ ಭಾಷೆಯಲ್ಲೇ ಚಿತ್ರದ ಬಹುಭಾಗ ಇದ್ದು, ಚಿತ್ರೀಕರಣ ಕೂಡಾ ಬಳ್ಳಾರಿ ಸುತ್ತಮುತ್ತಲಿನ ಭಾಗಗಳಲ್ಲಿ ನಡೆದಿದೆ. ಬಾಲ್ಯದಲ್ಲಿ ಪ್ರೀತಿಸಿದ್ದು ಹುಡುಗಿ ಅಮರ ಪ್ರೇಮಿಯಾದ ಅರುಣ್ ನ ಯೌವ್ವನದಲ್ಲಿ, ಜೀವನದಲ್ಲಿ ಸಿಗ್ತಾಳಾ ಎಂದು ತಿಳಿಯಲು ಚಿತ್ರ ನೋಡಬೇಕಿದೆ. ಇದೊಂದು ಕೌಟುಂಬಿಕ ಕಥೆಯೂ ಆಗಿದೆ. ಈ ಚಿತ್ರದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಫೇಮಸ್ ಆಗ್ತಿವೆ. ಹಾಡುಗಳಿಗೆ ಯೋಗರಾಜ್ ಭಟ್ Yogaraj Bhat, ಜಯಂತ್ ಕಾಯ್ಕಿಣಿ Jayanth Kaikini ಸಾಹಿತ್ಯವಿದೆ.
ತಾರಾಬಳಗದಲ್ಲಿದ್ದಾರೆ ಖ್ಯಾತನಾಮರು
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ Manjamma Jogithi, ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ Huligeppa Kattimani, ಅರ್ಚನಾ ಕೊಟ್ಟಿಗೆ, ಶ್ವೇತಾ ಭಟ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಧರ್ಮಣ್ಣ ಕಡೂರು, ಕ್ರಿತಿ ಭಟ್, ರಂಜಿತ ಪುಟ್ಟಸ್ವಾಮಿ, ರಾಧಾ ರಾಮಚಂದ್ರ ಮುಂತಾದವರು ತಾರಾಗಣದಲ್ಲಿದ್ದಾರೆ. ಇದೇ ತಿಂಗಳ 25 ರಂದು ತೆರೆಗೆ ಬರುತ್ತಲಿದೆ ಅಮರ ಪ್ರೇಮಿ ಅರುಣ್.