- ಕಥಾಸಂಕಲನ ಆಧಾರಿತ ಚಿತ್ರ “ಬಯಕೆಗಳು ಬೇರೂರಿದಾಗ” Bayakegalu Beruridaga ಏಪ್ರಿಲ್ ನಲ್ಲಿ ಬಿಡುಗಡೆಗೆ ಸಿದ್ಧ
- ಎನ್. ಜ್ಯೋತಿ ಲಕ್ಷ್ಮೀ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ
- ಬಿಡುಗಡೆಗೂ ಮೊದಲೇ 21 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ಒಂದು ಅದ್ಭುತ ಕತೆಗೆ ಎನ್. ಜ್ಯೋತಿ ಲಕ್ಷ್ಮೀ ಅವರು ಆಕ್ಷನ್ ಕಟ್ ಹೇಳಿ ಸುಂದರ, ಭಾವನಾತ್ಮ ಚಲನಚಿತ್ರವಾಗಿ ರೂಪುಗೊಳಿಸಿದ್ದಾರೆ. ಪ್ರೀತಿಯ ಶಕ್ತಿ ಏನು, ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿ ಎಷ್ಟು ಮಹತ್ತರವಾದ ಪಾತ್ರವಹಿಸುತ್ತದೆ ಎಂಬ ಕಥಾಎಳೆಯನ್ನು ಹೊಂದಿರುವ ಚಿತ್ರ ಇದಾಗಿದ್ದು ಏಪ್ರಿಲ್ ತಿಂಗಳಲ್ಲಿ ರಾಜ್ಯದಾದ್ಯಂತ ಸಿನಿಮಾ ಮಂದಿರಗಳಲ್ಲಿ ಸೆಟ್ಟೇರಲು ತಯಾರಾಗಿದೆ.

ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ
ಎನ್. ಸುದರ್ಶನ್ ಅವರು ಬಂಡವಾಳ ಹೂಡಿದ ಈ ಚಿತ್ರ, ರಿಲೀಸ್ ಗೂ ಮುನ್ನವೇ 21 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. Penzance international film festival Cornwall UK- 2024, Hohe international film festival Germany -2024 ಸೇರಿದಂತೆ ಅನೇಕ ಅವಾರ್ಡ್ ಗಳನ್ನು ಕೂಡಾ ಈ ಸಿನಿಮಾ ಪಡೆದುಕೊಂಡಿದೆ ಎಂಬುದೇ ಹೆಮ್ಮೆಯ ವಿಚಾರ.
ಆಕರ್ಷ ಆದಿತ್ಯ ಆಕರ್ಷಣೆ ಈ ಚಿತ್ರಕ್ಕಿದೆ
ಹತ್ತಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಾಯಕ ನಟನ ಪಾತ್ರವನ್ನು ನಿರ್ವಹಿಸಿರುವ ಆಕರ್ಷ್ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾತಿಚರಾಮಿ ಚಿತ್ರದಲ್ಲಿ ಉತ್ತಮ ನಟಿ ಬಿರುದನ್ನು ಪಡೆದುಕೊಂಡ ಶರಣ್ಯ ಈ ಸಿನಿಮಾದ ನಾಯಕಿ. ಉಳಿದಂತೆ ಶೈಲಜಾ ಜೋಶಿ, ಮಾನಸ ಜೋಶಿ, ಅಜಯ್ ಸತ್ಯನಾರಾಯಣ, ಕಾರ್ತಿಕ್ ಸುಂದರಂ ಮುಖ್ಯ ಪಾತ್ರ ಗಳಲ್ಲಿ ಕಾಣಿಸಿಕೊಂಡಿದ್ದಾರೆ.