ತೀರ್ಥಹಳ್ಳಿಯ ಯುವ ನಿರ್ದೇಶಕ ಅಭಿಜಿತ್ Abhijith Thirthahalli ಅವರ ಬಹಳಾ ವರ್ಷಗಳ ಕನಸೇ “ಅಪಾಯವಿದೆ ಎಚ್ಚರಿಕೆ” ( Apaayavide Eccharike ) ಚಲನಚಿತ್ರ. ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಬಹಳಷ್ಟು ಶ್ರಮಪಟ್ಟಿರುವ ಇವರಿಗೆ, ನಿರ್ಮಾಪಕ ಮಂಜುನಾಥ್ ಹಾಗೂ ಅವರ ಸಹೋದರಿ ಮಂಜುಳಾ ಬೆಂಬಲ ನೀಡಿ ಇದೀಗ ಈ ಚಿತ್ರದ ಮೋಷನ್ ಪೋಸ್ಟರ್ ಹೊರಬಂದಿದೆ. ಹತ್ತು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದ ಅಭಿಜಿತ್ ತೀರ್ಥಹಳ್ಳಿಯವರ ಸ್ವತಂತ್ರ ನಿರ್ದೇಶದ ಮೊದಲ ಸಿನೆಮಾ ಇದಾಗಿದ್ದು ಇದೊಂದು ಹಾರರ್ ಜಾನರ್ ಸಿನೆಮಾ ಮತ್ತೆ ಸಸ್ಪೆನ್ಸ್ ಅಡ್ವೆಂಚರ್ ಸಿನೆಮಾವಾಗಿದೆ. ಹಾಗೇ ಪಂಚಭೂತಗಳ ಆಧಾರದಲ್ಲಿ ಮೂಡಿಬಂದಿರುವ ಈ ಚಿತ್ರದ ಒಂದೊಂದು ಪಾತ್ರ ಒಂದೊಂದು ತತ್ತ್ವಗಳನ್ನು ಪ್ರತಿಬಿಂಬಿಸುತ್ತದೆ.
ಕಿರುತೆರೆಯಲ್ಲಿ ಸಾಧನೆ ಮಾಡುತ್ತಾ ಸಿನೆಮಾ ಕ್ಷೇತ್ರದಲ್ಲಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಜೀ ಕನ್ನಡದ ಪ್ರಸಿದ್ಧ ಧಾರಾವಾಹಿ “ಅಣ್ಣಯ್ಯ” ದ ನಾಲ್ಕು ತಂಗಿಯರ ಮುದ್ದಿನ ಅಣ್ಣಯ್ಯನ ಪಾತ್ರಧಾರಿ Vikash Uthaiah ವಿಕಾಶ್ ಉತ್ತಯ್ಯ ಅವರು ಹೀರೋ ಪಾತ್ರದಲ್ಲಿದ್ದಾರೆ. ತಾರಾಗಣದಲ್ಲಿ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ರಾಧಾ ಭಗವತಿ ಮುಂತಾದವರು ಇದ್ದಾರೆ. ಸುನಾದ್ ಗೌತಮ್ ಅವರು ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ 3 ಹಾಡುಗಳಿದ್ದು, ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಲಿವೆ. ಹರ್ಷಿತ್ ಪ್ರಭು ಸಂಕಲನ ಮಾಡಿದ್ದಾರೆ.
ಯುವ ಪ್ರತಿಭೆಗಳೆಲ್ಲರೂ ಸೇರಿ ಕೈ ಹಾಕಿರುವ ಈ ಹೊಸ ಸಾಹಸಕ್ಕೆ ಯಶಸ್ಸಾಗಲಿ, ಇನ್ನಷ್ಟು ಹೊಸ ಪ್ರತಿಭೆಗಳು ಮುನ್ನೆಲೆಗೆ ಬರಲಿ ಎಂಬುದು ಎಲ್ಲರ ಹಾರೈಕೆ.
