- ಈ ಕಾಲದ ವಾಸ್ತವಿಕ ಕತೆ ಹೇಳುವ “ಅಂತರ್ಯಾಮಿ” ಶೀಘ್ರದಲ್ಲಿ ತೆರೆಗೆ
- ಕೆ. ಧನಂಜಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
- ನಾಯಕನಾಗಿ ಪ್ರಣವ್ ಮತ್ತು ನಾಯಕಿಯಾಗಿ ಮೋಹಿರ ಆಚಾರ್ಯ ಮಿಂಚಿದ್ದಾರೆ.
ಯುವ ಪೀಳಿಗೆಯ ಸಾಮಾಜಿಕ ಜಾಲತಾಣದ ಗೀಳು, ಇದರಿಂದಾಗುವ ಅಪಾಯ ಮತ್ತು ಪರಿಹಾರದ ಕುರಿತು ಯೋಚಿಸುವಂತೆ ಮಾಡುವ ಚಿತ್ರವೊಂದು ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಿನಿಮಾದ ಹೆಸರು ” ಅಂತರ್ಯಾಮಿ” Antharyami. ಕೆ. ಧನಂಜಯ K. Dhananjaya ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗುರುರೇಣುಕಾ ಪ್ರೊಡಕ್ಷನ್ Gururenuka Production ಬ್ಯಾನರ್ ಅಡಿಯಲ್ಲಿ ನವೀನ್ ಎನ್ ಜಿ Naveen N G ಈ ಚಿತ್ರದ ನಿರ್ಮಾಪಕರು. ನಾಯಕನಾಗಿ ಪ್ರಣವ್ Pranav ಮತ್ತು ನಾಯಕಿಯಾಗಿ ಮೋಹಿರ ಆಚಾರ್ಯ Mohira Acharya ಮಿಂಚಿದ್ದು, ಉಳಿದಂತೆ ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾ, ರುದ್ರ ಮುನಿ, ಯೋಗೀಶ್ ತಾರಾಬಳದಲ್ಲಿದ್ದಾರೆ. ನಿರ್ದೇಶನ ತಂಡದಲ್ಲಿ ರವಿ ಶಂಕರ್ ನಾಗ್, ಶರತ್ ಘಾಟಿ, ಮಂಜುನಾಥ್ ಹೊಸ ರಂಗಾಪುರ, ಮುಕುಂದ, ರಾಣಾ, ವಸಂತ್ ಸಾಥ್ ನೀಡಿದ್ದಾರೆ.
ಚಿತ್ರೀಕರಣ ಪೂರೈಸಿದ ಚಿತ್ರತಂಡ
ಉಳಿದಂತೆ ಪ್ರೊಡಕ್ಶನ್ ನಲ್ಲಿ ಗುರುರೇಣುಕಾ , ಛಾಯಾಗ್ರಹಣದಲ್ಲಿ ಎಸ್. ಬಾಲು, ಸಂಗೀತದಲ್ಲಿ ದೇಸಿ ಮೋಹನ್ ಜೊತೆಗಿದ್ದಾರೆ. ವಿನಯ್ ಕಾವ್ಯಕಾಂತಿ ಸಾಹಿತ್ಯವಿದೆ. ಅರವಿಂದ್ ರಾಜ್ ಸಂಕಲನವಿದೆ. ಬಾಲ ಮಾಸ್ಟರ್ ನೃತ್ಯ ನಿರ್ದೇಶನವಿದೆ. ಸಿನಿಮಾ ತಂಡ ಈಗಾಗಲೇ ತುಮಕೂರಿನ ವಿವಿದೆಡೆ ಹಾಗೂ ಸೋಮವಾರ ಪೇಟೆ, ಮಾದಾಪುರ, ಮೊದಲಾದ ಕಡೆ ಚಿತ್ರೀಕರಣ ಯಶಸ್ವಿಯಾಗಿ ಪೂರೈಸಿದ್ದು ಶೀಘ್ರದಲ್ಲಿಯೇ ತೆರೆಗಪ್ಪಳಿಸಲಿದೆ.