ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು!

Date:

  • ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸಿದ “ಅಂತರ್ಯಾಮಿ”ಚಿತ್ರದ ಲಿರಿಕಲ್ ವಿಡಿಯೋ ಸಾಂಗು!
  • “ಹಕ್ಕಿ ನಾನು ಹಗಲಿನಲ್ಲಿ, ಚುಕ್ಕಿ ನಾನು ಮುಗಿಲಿನಲ್ಲಿ” ಎನ್ನುವ ಹೊಸ ವಿಡಿಯೋ ಸಾಂಗ್ ರಿಲೀಸ್
  • ಹಕ್ಕಿಯಂತೆ ಸುಶ್ರಾವ್ಯವಾಗಿ ಮೇಘನಾ ಕುಲಕರ್ಣಿ ಮತ್ತು ದೇಸಿ ಮೋಹನ್ ಹಾಡಿದ್ದಾರೆ.

“ಗೀಚಿದ್ದೇ ಗೀಚೋ ಬ್ರಹ್ಮ ನಿನ್ನ ಪೆನ್ನು ಖಾಲಿ ಆಗಲ್ವಾ” Geechidde Gecho Brahma ಎಂದು ಡಿಫರೆಂಟ್ ಲಿರಿಕ್ಸ್ ಇರೋ ಹಾಡೊಂದನ್ನು ರಿಲೀಸ್ ಮಾಡಿ ಈಗಾಗಲೇ ಸಖತ್ ಸೌಂಡ್ ಮಾಡಿದ್ದ “ಅಂತರ್ಯಾಮಿ” Antharyami ಸಿನಿಮಾ, ಇದೀಗ “ಹಕ್ಕಿ ನಾನು ಹಗಲಿನಲ್ಲಿ, ಚುಕ್ಕಿ ನಾನು ಮುಗಿಲಿನಲ್ಲಿ” Hakki Nanu Hagalalli, Chukki Nanu Mugilalli ಎನ್ನುವ ಹೊಸ ವಿಡಿಯೋ ಸಾಂಗ್ ನ್ನು ರಿಲೀಸ್ ಮಾಡಿದೆ. ಪ್ರಕೃತಿ ಮತ್ತು ಜೀವನಪ್ರೀತಿಯ ಸೆಂಟಿಮೆಂಟ್ ಇರೋ ಹಾಡು ನೋಡುಗರ ಕಿವಿಯನ್ನೂ, ಚೆಂದದ ದೃಶ್ಯ ಸಂಯೋಜನೆಯ ಮೂಲಕ ಕಣ್ಣನ್ನೂ ತಂಪೇರಿಸುತ್ತದೆ. ಈ ಹಾಡು ಸಖತ್ ಟ್ರೆಂಡಿಯಾಗಿದ್ದು, ಕೇಳುಗರ ಹಾರ್ಟ್ ನಲ್ಲಿ ಹಿತವಾದ ಫೀಲ್ ಮೂಡಿಸುತ್ತೆ. ಇಲ್ಲಿ ಹಕ್ಕಿಯಂತೆ ಸುಶ್ರಾವ್ಯವಾಗಿ ಮೇಘನಾ ಕುಲಕರ್ಣಿ Meghana Kulakarni ಮತ್ತು ದೇಸಿ ಮೋಹನ್ Desi Mohan ಹಾಡಿದ್ದಾರೆ. ದೇಸಿ ಮೋಹನ್ ಅವರದ್ದೇ ಮಧುರವಾದ ಸಂಗೀತವಿದೆ. ವಿನಯ್ ಕಾವ್ಯಕಾಂತಿ ಕಲರ್ ಫುಲ್ ಸಾಹಿತ್ಯದ ಸಾಥ್ ಇದೆ.

ಪ್ರತಿಭಾವಂತ ಯುವ ಉಪನ್ಯಾಸಕರ ಅದ್ದೂರಿ ಪ್ರಯತ್ನ

“ಅಂತರ್ಯಾಮಿ” ಚಿತ್ರ, ಪ್ರತಿಭಾವಂತ ಯುವ ಉಪನ್ಯಾಸಕರೇ ಸೇರಿ ಮಾಡಿದ ಒಂದು ಅದ್ದೂರಿ ಪ್ರಯತ್ನ.ಇಲ್ಲಿಒಂದಷ್ಟು ಬದುಕಿನ ಸಂಬಂಧಗಳ ಜೊತೆಗೆ ಸಾಮಾಜಿಕ ಸಂದೇಶ ಕೂಡ ನೀಡಲಾಗಿದೆಯಂತೆ. ಅಂದ ಹಾಗೆ ಈ ಚಿತ್ರಕ್ಕೆ ಕೆ ಧನಂಜಯ್ K Dhananjay ಅವರು ಆಕ್ಷನ್ ಕಟ್ ಹೇಳಿದ್ದಾರೆ. ನವೀನ್ ಎಂ.ಜಿ Naveen M G ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಮಲಾ ನರಸಿಂಹ ಅವರ ಸಹ ನಿರ್ಮಾಣವಿದೆ. ಚಿತ್ರದಲ್ಲಿ ಪ್ರಣವ್ ಮೊಹಿರಾ ಆಚಾರ್ಯ Pranav Mohira Acharya ಮತ್ತು ಬೇಬಿ ಹಂಸಿ Baby Hamsi, ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸಿದ್ದು ಮಂಡ್ಯ, ಉದಯ್ ಅಂಕರವಳ್ಳಿ, ತುಮಕೂರು ಕಿಟ್ಟಿ, ಆನಂದ್, ರೇಣುಕಾಂಬ ಎಲ್.ಎಸ್ ಮೊದಲಾದ ಪ್ರತಿಭಾವಂತರ ಕಲಾವಿದರ ದಂಡೇ ಇಲ್ಲಿದೆ.

ಎಸ್ ಬಾಲು ಅವರ ಕ್ಯಾಮರಾ ಕೈಚಳಕವಿದ್ದು, ರವಿಶಂಕರ್ ನಾಗ್ ಸಹನಿರ್ದೇಶನವಿದೆ. ಇನ್ನು ಸಂಕಲನದಲ್ಲಿ ಅರವಿಂದ್ ರಾಜ್, ಕಲಾ ನಿರ್ದೇಶಕರಾಗಿ ಸಾರಥ್ ಘಾಟಿ ಶ್ರಮಿಸಿದ್ದಾರೆ. ಗುರು ರೇಣುಕಾ ಪ್ರೊಡಕ್ಶನ್ ನಿಂದ ಮೂಡಿಬಂದಿರುವ ಚಿತ್ರದ ಎರಡೂ ಲಿರಿಕಲ್ ವಿಡಿಯೋಗಳು ಇದೀಗ “ಅಂತರ್ಯಾಮಿ”ಚಿತ್ರದ ಕುರಿತು ಕುತೂಹಲ ಮೂಡಿಸಿದೆ. ಪ್ರೇಕ್ಷಕರು ಚಿತ್ರಕ್ಕಾಗಿ ಎದುರು ನೋಡುವಂತೆ ಪ್ರೇರೇಪಿಸಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...