- ಕ್ಯೂರಿಯಾಸಿಟಿ ಮೂಡಿಸ್ತಿದೆ “ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೈಲರ್
- “ಅಣ್ಣಯ್ಯ” ಧಾರಾವಾಹಿಯ ವಿಕಾಶ್ ಉತ್ತಯ್ಯ ನಾಯಕರಾಗಿ, ಅಭಿಜಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ ಚಿತ್ರ “ಅಪಾಯವಿದೆ ಎಚ್ಚರಿಕೆ”
- ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ ಚಿತ್ರದ ಟ್ರೈಲರ್.
ಹೊಸತಂಡದ, ಯುವ ತಂಡದ ಹೊಸಪ್ರಯತ್ನಕ್ಕೆ ಬೆಂಬಲ ನೀಡುತ್ತಾ “ಅಪಾಯವಿದೆ ಎಚ್ಚರಿಕೆ” Apayavide Echarike ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಮಂಜುನಾಥ್.ವಿ.ಜಿ ಹಾಗೂ ಪೂರ್ಣಿಮಾ ಗೌಡ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಿರಿಯ ಚಲನಚಿತ್ರ ಪತ್ರಕರ್ತೆ ಸರಸ್ವತಿ ಜಾಗಿರದಾರ್, ಚಲನಚಿತ್ರ ಸ್ಥಿರ ಛಾಯಾಗ್ರಾಹಕರಾದ ಮನು, ಮೋಕ್ಷೇಂದ್ರ ಇವರ ಕೈಯಿಂದ ಬಿಡುಗಡೆಗೊಂಡಿದ್ದು, ಫೆ. 28 ರಂದು ಚಿತ್ರ ತೆರೆಯ ಮೇಲೆ ರಾಜ್ಯಾದ್ಯಂತ ಕಾಣಿಸಿಕೊಳ್ಳಲಿದೆ.

ಫೇಮಸ್ ಆಗಿದೆ ಚಿತ್ರದ ಹಾಡುಗಳು
ಒಂದೊಳ್ಳೆ ಕಂಟೆಂಟ್ ನೊಂದಿಗೆ ಹಾರಾರ್ ಜಾನರ್ ನ ಕಥಾಹಂದರವನ್ನೂ ಹೊಂದಿರುವ ಈ ಚಿತ್ರದ ಟೀಸರ್ ಹಾಗೂ ಚುರುಕು ನೋಟವೇ ಮತ್ತು ಬ್ಯಾಚುಲರ್ ಹಾಡುಗಳು ಈಗಾಗಲೇ ಜನರ ಮನಸ್ಸನ್ನು ಸೆಳೆಯುತ್ತಿವೆ. ನೀರು, ಬೆಂಕಿ, ಗಾಳಿ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖಪಾತ್ರಗಳು ಚಿತ್ರದಲ್ಲಿದ್ದು, ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಮ್ಮ ಚೊಚ್ಚಲ ಚಿತ್ರದ ಕುರಿತಾಗಿ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ತಿಳಿಸಿದ್ದಾರೆ.
ಹೊಸಚಿತ್ರ ತಂಡಕ್ಕೆ ಬೇಕು ಎಲ್ಲರ ಹಾರೈಕೆ
ಚಿತ್ರದ ನಾಯಕಿಯಾಗಿ ರಾಧಾ ಭಗವತಿ Radha Baghavathi ಕಾಣಿಸಿಕೊಂಡಿದ್ದು, ಅಶ್ವಿನ್ ಹಾಸನ್, ದೇವ್, ಛಾಯಾಗ್ರಾಹಕರಾಗಿ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಹಾಗೂ ಗಾಯಕ ರಜತ್ ಹೆಗ್ಡೆ ಮುಂತಾದವರು ಚಿತ್ರತಂಡದಲ್ಲಿದ್ದಾರೆ. ಹೊಸಚಿತ್ರ ತಂಡದ ಹೊಸಪ್ರಯತ್ನಕ್ಕೆ ಸಿನಿಪ್ರೇಮಿಗಳ ಪ್ರೋತ್ಸಾಹವಿರಲಿ ಎಂಬುದೇ ಚಿತ್ರ ತಂಡದವರೆಲ್ಲರ ಆಶಯವಾಗಿದೆ.