- ಸ್ಯಾಂಡಲ್ ವುಡ್ ತೆರೆ ಮೇಲೆ ಬರಲಿದೆ ಆ್ಯಪಲ್ ಕಟ್
- ಸಿಂಧು ಗೌಡ ಆಕ್ಷನ್ ಕಟ್ ಹೇಳಿರುವ ಚಿತ್ರ “ಆ್ಯಪಲ್ ಕಟ್” ಮಾರ್ಚ್ 7 ಕ್ಕೆ ತೆರೆಗೆ ಬರಲಿದೆ.
- ಸಾನ್ವಿ ಪ್ರೊಡಕ್ಷನ್ ಲಾಂಚನದಡಿ ಶಿಲ್ಪಾ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಹಿರಿಯ ನಿರ್ದೇಶಕಿ ರಾಜಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ಚೊಚ್ಚಲ ಚಿತ್ರ “ಆ್ಯಪಲ್ ಕಟ್” Apple Cut Movie ಮಾರ್ಚ್ 7 ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದ್ದು, ಇತ್ತೀಚೆಗಷ್ಟೇ ಗಣೇಶ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಸಾನ್ವಿ ಪ್ರೊಡಕ್ಷನ್ ಲಾಂಛನದಡಿ ಶಿಲ್ಪಾ ಪ್ರಸನ್ನ ನಿರ್ಮಾಣವಿರುವ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಸೂರ್ಯ ಗೌಡ, ಅಶ್ವಿನಿ ಪೋಲೆಪಲ್ಲಿ, ಅಮೃತ, ಮೀನಾಕ್ಷಿ ಮುಂತಾದವರಿದ್ದಾರೆ. ವೀರ ಸಮರ್ಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಮಾನವಶಾಸ್ತ್ರದ ಮೋಡಿಯಿರುವ ಚಿತ್ರ
ಐದು ಗೆಳೆಯರ ಸುತ್ತ ನಡೆಯುವ ಈ ಕಥೆ, ಮಾನವಶಾಸ್ತ್ರದ ಅಂಶವನ್ನು ಒಳಗೊಂಡಿದೆ. ಮಾನವಶಾಸ್ತ್ರದ ಹಿನ್ನೆಲೆಯಿರುವ ನಿರ್ದೇಶಕಿ ಇಲ್ಲಿ ಇದನ್ನು ಬಳಸಿಕೊಂಡು ಚಿತ್ರವನ್ನು ಇನ್ನಷ್ಟು ಚಂದಗಾಣಿಸುವ ಪ್ರಯತ್ನ ಮಾಡಿದ್ದಾರೆ. ಶವವೊಂದನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ಅದೂ ಕೂಡಾ ಒಂದು ಪ್ರಮುಖ ಪಾತ್ರವಹಿಸುತ್ತದೆ ಎಂಬುದೇ ಚಿತ್ರದ ವಿಶೇಷ. ಟ್ರೇಲರ್ ಕುತೂಹಲಕಾರಿಯಾಗಿದ್ದು ಸಿನಿಮಾ ಹೇಗೆ ಜನರನ್ನು ಸೆಳೆಯುತ್ತದೆ ನೋಡಬೇಕಿದೆ.