- ಸೆಟ್ಟೇರಲಿದೆ “ಅಪ್ಪು ಟ್ಯಾಕ್ಸಿ”; ಪುನೀತ್ ಗೌರವಾರ್ಥ ಬರಲಿದೆ ಈ ಮೂವಿ
- ಜಗ್ಗು ಸಿರ್ಸಿ ಆಕ್ಷನ್ ಕಟ್ ಹೇಳಲಿರುವ ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬೀರಿದ ಪ್ರಭಾವದ ಕುರಿತು ಹೇಳುವ ಪ್ರಯತ್ನ
- ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮಾರ್ಚ್ 17 ರಂದು ದಿಲೀಪ್ ಕುಮಾರ್ ಎಚ್ಆರ್ ತಮ್ಮ ಮುಂಬರುವ ಚಿತ್ರ ಘೋಷಿಸಿದ್ದಾರೆ.
ಸಿನಿಮಾ ಪತ್ರಿಕೋದ್ಯಮ, ಪ್ರೊಡಕ್ಷನ್ ಮತ್ತು ವಿತರಣೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ದಿಲೀಪ್ ಕುಮಾರ್ ಎಚ್.ಆರ್. Dilip Kumar H R ಭಾರತೀಯ ಚಲನಚಿತ್ರ ತಯಾರಕರ ಸಂಘದ ಸಹ ಸಂಸ್ಥಾಪಕರಾಗಿದ್ದಾರೆ. ಇವರು “ಅಪ್ಪು ಟ್ಯಾಕ್ಸಿ “ Appu Taxi ಚಿತ್ರವನ್ನು ಘೋಷಿಸಿದ್ದಾರೆ. ಪುನೀತ್ Punith Rajkumar ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬೀರಿದ ಪ್ರಭಾವದ ಕುರಿತು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗುತ್ತಿದೆ.
ಮನಸೆಳೆಯುತ್ತಿದೆ ಚಿತ್ರದ ಶೀರ್ಷಿಕೆ ವಿನ್ಯಾಸ
ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಒಳಗೊಂಡಿರುವ ಚಿತ್ರದ ಶೀರ್ಷಿಕೆ ವಿನ್ಯಾಸವು ಹೃದಯಸ್ಪರ್ಶಿಯಾಗಿದ್ದು, ಸಿನಿಪ್ರೇಮಿಗಳ, ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ. ಪುನೀತ್ ನಿಜ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು ಆಧರಿಸಿದೆ ಈ ಚಿತ್ರ. ಅವು ಸ್ವತಃ ಪ್ರತಿನಿಧಿಸಿದ ಮೌಲ್ಯಗಳು ಮತ್ತು ಆದರ್ಶಗಳ ಮೂಲಕ, ಮನುಷ್ಯನ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಟ್ಯಾಕ್ಸಿ ಚಾಲಕನ ಪ್ರಯಾಣದ ಕುರಿತಾದ ಕಥಾಹಂದರೇ ಈ ಚಿತ್ರದ ಎಳೆಯಾಘಿರಲಿದೆ. ಅಪ್ಪು, ತನ್ನ ಕೆಲಸ ಮತ್ತು ಮಾತುಗಳ ಮೂಲಕ ಜನಜೀವನದ ಮೇಲೆ ಹೇಗೆ ಪರಿಣಾಮ ಬೀರಿದರು ಎಂಬುದನ್ನು ಎತ್ತಿ ತೋರಿಸುತ್ತದೆ.
ಅನುಭವಿಗಳ ತಂಡ ಇಲ್ಲಿದೆ
ಸ್ಕೈಲೈನ್ ಮ್ಯೂಸಿಕ್ನ Skyline Music ಸಹಯೋಗದೊಂದಿಗೆ ಚಿತ್ರ ನಿರ್ಮಾಣವಾಗಲಿದೆ. ಅನುಭವಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ಜಗ್ಗು ಸಿರ್ಸಿ Jaggu Sirsi ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಲಿವುಡ್‌ನಲ್ಲಿ ತರಬೇತಿ ಪಡೆದ ತಾಂತ್ರಿಕ ತಜ್ಞ ಶಾಮ್ ರೇ, Sham Ray ಅನಿಮೇಟೆಡ್ ಗ್ರಾಫಿಕ್ಸ್ ಅನ್ನು ನೋಡಿಕೊಳ್ಳುತ್ತಾರೆ. ಬರಹಗಾರ ವೈದ್ ಬರೆದ ಚಿತ್ರಕಥೆಯು ಪುನೀತ್ ಅವರ ಪರಂಪರೆಯ ಆಳ ಮತ್ತು ಸೌಂದರ್ಯವನ್ನು ತೆರೆ ಮೇಲೆ ತರುವ ಗುರಿಯನ್ನು ಹೊಂದಿದೆ. ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 2026ರ ಮಾರ್ಚ್ 17 ಕ್ಕೆ ಪುನೀತ್ ಹುಟ್ಟಿದ ದಿನಕ್ಕೆ ಈ ಚಿತ್ರ ಕೊಡುಗೆಯಾಗಲಿದೆ.