- ಸಖತ್ ಟ್ರೆಂಡಿಂಗ್ ನಲ್ಲಿದೆ “ಆರಿದ್ರಾ” ಸಿನಿಮಾದ ವಿಡಿಯೋ ಸಾಂಗ್
- ಹೊಸತನದಿಂದ ಗಮನಸೆಳೆಯುತ್ತಿದೆ, “ಲೈಫೊಂದು ಆಫರ್, ನಗುತ್ತಿದ್ರೆ ಸೂಪರ್” ಹಾಡು
- ಈ ಜನರೇಶನ್ ನ ಪ್ರೇಕ್ಷಕರಿಗೆ ಹೊಸತಾದ ಕಚಕುಳಿ ಮೂಡಿಸುತ್ತದೆ.
“ಆರಿದ್ರಾ” Aridra ಎನ್ನುವ ಹೊಸ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ಹೊಸತನದಿಂದ ಗಮನಸೆಳೆಯುತ್ತಿದೆ. “ಲೈಫೊಂದು ಆಫರ್, ನಗುತ್ತಿದ್ರೆ ಸೂಪರ್” Life ondu offer, naguthidre super ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ವಿಡಿಯೋ ಸಾಂಗ್, ಬದುಕಿನ ವಿವಿಧ ಮಗ್ಗಲುಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ. ಅರ್ಥಪೂರ್ಣ ಸಾಲುಗಳು ಈ ಕಾಲಕ್ಕೆ ಒಗ್ಗುವಂತಿದೆ. ಮ್ಯೂಸಿಕ್ ಕೂಡ ಕೇಳುಗರಿಗೆ ಸಖತ್ ಕಿಕ್ಕ್ ಕೊಡುವ ಹಾಗಿದ್ದು ಈ ಜನರೇಶನ್ ನ ಪ್ರೇಕ್ಷಕರಿಗೆ ಹೊಸತಾದ ಕಚಕುಳಿ ಮೂಡಿಸುತ್ತದೆ.
ಚಿತ್ರತಂಡದಲ್ಲಿದ್ದಾರೆ ಇವರೆಲ್ಲ
ಅಜಯ್ ಸೂರ್ಯ Ajay Soorya ಅವರು ಕಥೆ, ಚಿತ್ರ ಕತೆ ಸಂಭಾಷಣೆ ಬರೆದು ನಿರ್ದೇಶಿಸಿದ ಈ ಚಿತ್ರವನ್ನು, ನಾಗರತ್ನ ರಮೇಶ್ Nagarathna Ramesh ಅವರು ನಿರ್ಮಾಣ ಮಾಡಿದ್ದಾರೆ. ಅಜಯ್ ಸೂರ್ಯಾ ನಾಯಕರಾಗಿ, ನವ್ಯಶ್ರೀ Navyashree ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಯೋಗೀಶ್, ಮಂಜೇಶ್, ರಕ್ಷಿತಾ, ಕಾರ್ತಿಕ್ ವರ್ಣೇಕರ್, ಭೈರವಿ ಮೊದಲಾದ ಕಲಾವಿದರು ತಾರಾಗಣದಲ್ಲಿದ್ದಾರೆ. ಶಿವಸಮರ್ಥ್ ಅವರ ಸಮರ್ಥವಾದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವಿದ್ದು, ಸುಬ್ರಹ್ಮಣ್ಯ ಆಚಾರ್ಯ ಕಾಡುವಂತೆ ಹಾಡಿದ್ದಾರೆ. ಮೋಹನ್ ಎಂ.ಎಸ್ ಅವರ ಛಾಯಾಗ್ರಹಣದ ಕೈಚಳಕವಿದೆ. ಶ್ರೀ ಜಾವ್ಲಿ ಅವರ ಅಚ್ಚುಕಟ್ಟಾದ ಸಂಕಲನವಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ ಸಾಂಗ್
ಈಗಾಗಲೇ “ಆರಿದ್ರಾ” ಸಿನಿಮಾ ತಂಡದಿಂದ “ಎದೆಗೂಡಿನಲ್ಲಿ” Edegoodalli ಲಿರಿಕಲ್ ವಿಡಿಯೋ ಸೇರಿದಂತೆ ಒಟ್ಟು ಎರಡು ವಿಡಿಯೋ ಸಾಂಗ್ ಗಳು ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಇದೀಗ “ಲೈಫೊಂದು ಆಫರ್, ನಗುತ್ತಿದ್ರೆ ಸೂಪರ್” ಎನ್ನುವ ಅರ್ಥಪೂರ್ಣವಾದ ವಿಡಿಯೋ ಸಾಂಗ್ ರಿಲೀಸ್ ಆಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಮೂಲಕ “ಆರಿದ್ರಾ” ಚಿತ್ರಕ್ಕಾಗಿ ಪ್ರೇಕ್ಷಕರನ್ನು ಕಾಯುವಂತೆ ಮಾಡಿದೆ.
ಆರಿದ್ರಾ ಚಿತ್ರಕ್ಕೆ ಸಾಥ್ ನೀಡಿದ ಮಾದೇವ ಚಿತ್ರದ ನಿರ್ದೇಶಕರಾದ ನವೀನ್ ರೆಡ್ಡಿ ಯವರು.
ಈಗಾಗಲೇ ಆರಿದ್ರಾ ಚಿತ್ರದ ಎದೆಗೂಡಿನಲಿ ಎಂಬ ಹಾಡು ಬಿಡುಗಡೆಯಗಿದ್ದು. ಇದೇ ಚಿತ್ರದ ಮತ್ತೊಂದು ಹಾಡು ಲೈಫ್ ಒಂದು ಆಫರ್ ಎಂಬ ಜರ್ನಿ ಸಾಂಗ್ ಎಂ ಆರ್ ಟಿ ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಗಿದ್ದು. ಚಿತ್ರದ ಬಗ್ಗೆ ಸದ್ಯ ಮಾದೇವ ಚಿತ್ರದ ನಿರ್ದೇಶಕರಾದ ನವೀನ್ ರೆಡ್ಡಿಯವರು ಚಿತ್ರತಂಡದ ಜೊತೆ ಮಾತನಾಡಿ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭಕೊರಿದ್ದಾರೆ.

Super song all the best for your movie
Very nice making …thanks to whole production team…