- ಲವ್ ಜೊತೆ ವಿಶಿಷ್ಟ ಥ್ರಿಲ್ಲಿಂಗ್ ಫೀಲ್ ಕೊಡುವ “ಆಸ್ಟಿನ್ ನ ಮಹನ್ಮೌನ” ಸೆಪ್ಟಂಬರ್ 5 ರಂದು ಎಂಟ್ರಿ
- ವಿಭಿನ್ನ ಶೀರ್ಷಿಕೆಯ, ಶುದ್ಧ ಎಮೋಷನಲ್, ಲವ್, ಥ್ರಿಲ್ಲಿಂಗ್ ಕಥೆಯನ್ನ ಹೊಂದಿರುವ ಚಿತ್ರ
- ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಿರ್ಮಿಸಿ ನಟಿಸಿ, ಆಕ್ಷನ್ ಕಟ್ ಹೇಳಿದ್ದಾರೆ.
ವಿಭಿನ್ನ ಶೀರ್ಷಿಕೆಯ, ಶುದ್ಧ ಎಮೋಷನಲ್, ಲವ್, ಥ್ರಿಲ್ಲಿಂಗ್ ಕಥೆಯನ್ನ ಹೊಂದಿರುವ “ಆಸ್ಟಿನ್ ನ ಮಹನ್ಮೌನ” Astin na Mahanmouna ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರತಂಡ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು ಸೆಪ್ಟಂಬರ್ 5ರಂದು ಚಿತ್ರ ತೆರೆ ಕಾಣಲಿದೆ.
ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ Vinay Kumar Vaidyanathan ನಟಿಸಿ, ನಿರ್ಮಾಣದ ಜೊತೆಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ರಿಷಾ ಗೌಡ, Risha Gowda ಪ್ರಕೃತಿ ಪ್ರಸಾದ್ Prakrithi Prasad ಇಬ್ಬರು ನಾಯಕಿಯರಾಗಿ ಸಾಥ್ ನೀಡಿದ್ದಾರೆ.
90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಕಥೆ
ಇಲ್ಲಿ ಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು, ಈ ಚಿತ್ರದಲ್ಲಿ ನಾಯಕನದ್ದು ಎರಡು ಶೇಡ್ ಗಳಲ್ಲಿ ಬರುವಂತಹ ಪಾತ್ರವಂತೆ. ಅಂದ ಹಾಗೆ ಈ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು , 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ. 2023 ರಲ್ಲಿ ಆರಂಭಗೊಂಡ ಈ ಚಿತ್ರ, ಮೈಸೂರು, ಹೊನ್ನಾವರ ಹಾಗೂ ಚಿಕ್ಕಮಗಳೂರಿನಲ್ಲಿ ಸುಮಾರು 23 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಕೆ .ಆರ್. ಜೆ ಫಿಲ್ಮ್ಸ್ KRJ Films ಮೂಲಕ ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದೆ. ಒಂದು ಹಾಡು ಲಾಟಿನ್ ಭಾಷೆಯಲ್ಲಿ ಮೂಡಿಬಂದಿದೆ. ಯುವ ಸಂಗೀತ ನಿರ್ದೇಶಕ ವಿಶ್ವಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಾಲರಾಜವಾಡಿ, ರಘು ರಾಮನಕೊಪ್ಪ, ಜಗಪ್ಪ, ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ರಾಜಕಾಂತ್ ಛಾಯಾಗ್ರಹಣ ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. AVV ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳು ಎಂ.ಆರ್.ಟಿ ಮ್ಯೂಸಿಕ್ ನಲ್ಲಿ MRT Music ಬಿಡುಗಡೆಯಾಗಿದೆ.