- “ಅವಳೆ ಕಾಂಚನ” ಹಾರರ್ ಮೂವಿ ಟ್ರೈಲರ್ ರಿಲೀಸ್
- ಮಂಡ್ಯ ನಾಗರಾಜ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ
- ನವನಟ ಜನಾರ್ಧನ್, ಪ್ರಿಯಾ ನಾಗಣ್ಣ ಜೋಡಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಎಂ.ಎನ್. ಮೂವೀಸ್ MN Movies ಬ್ಯಾನರ್ ಅಡಿಯಲ್ಲಿ ರಾಜೇಶ್ ನಾಯಕ್ ಹಿರಾ Rajesh Nayak Hira ಹಾಗೂ ವೆಂಕಟೇಶ್ ನಾಯಕ್ Venkatesh Nayak ಅರ್ಪಿಸುವ ಹಾರರ್ ಚಿತ್ರ “ಅವಳೆ ಕಾಂಚನ” Avale Kanchana. ಇದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಮಂಡ್ಯ ನಾಗರಾಜ್ Mandya Nagaraj. ಹೊಸಬರನ್ನು ಚಿತ್ರರಂಗಕ್ಕೆ ಕರೆತರುವ, ಬೆಳೆಸುವ ಉದ್ದೇಶ ಹೊಂದಿರುವ ನಿರ್ದೇಶಕರು ಸೋಲು-ಗೆಲುವು ಲೆಕ್ಕಿಸದೇ ಕೆಲಸ ಮಾಡುತ್ತಾ ಬಂದವರು. ಲಾಭದ ಉದ್ದೇಶವಿಲ್ಲದೇ ಸಂತೋಷಕ್ಕಾಗಿ ಒಳ್ಳೆಯ ಚಿತ್ರಗಳನ್ನು ನೀಡುವುದು ಇವರ ಬಯಕೆ.
ಹಾರರ್, ಥ್ರಿಲ್ಲರ್ ಕತೆ
ಚಿತ್ರದ ಟೈಲರ್ ಕುತೂಹಲಭರಿತವಾಗಿದ್ದು, ಇದೊಂದು ಹಳ್ಳಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆಯುವ ವಿವಾದದ ಕತೆಯಾಗಿದೆ. ಒಂದೇ ಊರಿನ ಇಬ್ಬರು ಹುಡುಗ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಆಗುವ ಪರ ವಿರೋಧ ಚರ್ಚೆಗಳು, ಸಮಸ್ಯೆಗಳನ್ನು ಹಾರರ್, ಥ್ರಿಲ್ಲರ್ ಮಿಶ್ರಣವಾಗಿ ನೋಡುಗರಿಗೆ ಉಣಬಡಿಸುವ ಪ್ರಯತ್ನ ಮಾಡಿದ್ದಾರೆ.
ನವನಟ ಜನಾರ್ಧನ್ Janardhan ಚಿತ್ರದ ನಾಯಕ, ಪ್ರಿಯಾ ನಾಗಣ್ಣ Priya Naganna ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಭೀಮಣ್ಣ ನಾಯಕ, ಹರಿಣಿ ನಟರಾಜ್, ಅಪೂರ್ವ ಮುಂತಾದವರು ತಾರಾಗಣದಲ್ಲಿದ್ದಾರೆ. ಕುಮಾರಸ್ವಾಮಿ ಸಂಗೀತ, ವರ್ಷಿತ್ ಎಸ್.ಎಸ್. ಛಾಯಾಗ್ರಹಣ ಹಾಗೂ ಸಂಕಲನವಿದೆ.