- ಟ್ರೇಲರ್ ನಿಂದ ಭರವಸೆ ಹುಟ್ಟಿಸಿರುವ “ಅವನಿರಬೇಕಿತ್ತು” ಈ ವಾರ ತೆರೆಗೆ
- ಅಶೋಕ್ ಸಾಮ್ರಾಟ್ ನಿರ್ದೇಶನದ ಸಿನಿಮಾಕ್ಕೆ ಭರತ್, ಸೌಮ್ಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
- ಜೂನ್ 27 ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ ಮೂವೀ
‘ಅಂದಕಾಲತ್ತಿಲ್ ಇಂದ ಕಾಲತ್ತಿಲ್’ Andakalatthil inda kalatthil ಹಾಡಿನಿಂದ ಫೇಮಸ್ ಆಗಿದ್ದ, ‘ಓ ಹೃದಯ’ O hrudaya ಸಾಂಗ್ನಿಂದ ಎಲ್ಲರ ಗಮನ ಸೆಳೆದಿದ್ದ “ಅವನಿರಬೇಕಿತ್ತು” Avanirabekittu ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮುರಳಿ ಬಿ.ಟಿ. Murali B T ಬಂಡವಾಳ ಹೂಡಿದ್ದು, ಅಶೋಕ್ ಸಾಮ್ರಾಟ್ Ashok Samrat ಈ ಚಿತ್ರಕ್ಕೆ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಭರತ್ Bharath ಮತ್ತು ಸೌಮ್ಯಾ Sowmya ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ನಿರೀಕ್ಷೆ ಹುಟ್ಟಿಸುತ್ತಿದೆ ಟ್ರೇಲರ್
ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಪಾಸಿಟಿವ್ ವೈಬ್ಸ್ ಮೂಡಿಸುತ್ತಿದೆ ಟ್ರೇಲರ್. ಲೋಕಿ ತವಸ್ಯಾ Loki Thavasya ಅವರು ಸಂಗೀತ ಸಂಯೋಜಿಸಿದ್ದಾರೆ. ದೇವರಾಜ್ ಪೂಜಾರಿ Devaraj Poojary ಅವರು ಛಾಯಾಗ್ರಹಣವಿದೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಹೊಂದಿದೆ ಚಿತ್ರ. ಪ್ರಶಾಂತ್ ಸಿದ್ದಿ, ಹಿರಿಯ ನಟಿ ಲಕ್ಷ್ಮೀ ದೇವಮ್ಮ, ಕಿರಣ್ ನಾಯಕ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಜೂನ್ 27 ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದ್ದು, ಸಿನಿಪ್ರಿಯರ ಕುತೂಹಲಕ್ಕೆ ತೆರೆಬೀಳಲಿದೆ.