- ತೆರೆ ಮೇಲೆ ಪಾಠ ಹೇಳಲು ಬರ್ತಿದಾರೆ “ಭಾರತಿ ಟೀಚರ್”
- ರಿಲೀಸ್ ಆಗಿದೆ “ಭಾರತಿ ಟೀಚರ್” ಚಿತ್ರದ ಟೀಸರ್
- ರಾಘವೇಂದ್ರ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಎಂ.ಎಲ್.ಪ್ರಸನ್ನ
“ಭಾರತಿ ಟೀಚರ್” Bharathi Teacher ಏಳನೇ ತರಗತಿ ಹೀಗೊಂದು ಸಿನಿಮಾದ ಹೆಸರೇ ಕುತೂಹಲ ಹುಟ್ಟಿಸುವಂತಿದ್ದು ಚಿತ್ರದಲ್ಲಿ ಏನಿರಬಹುದು ಎಂಬೆಲ್ಲಾ ಯೋಚನೆಗಳು ಬರಲಾರಂಭಿಸುತ್ತವೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಚಿವ ಸಂತೋಷ್ ಲಾಡ್ Santhosh Lad, ಸಿಹಿಕಹಿ ಚಂದ್ರು Sihikahi Chandru ಮುಂತಾದವರು ಪಾತ್ರವಹಿಸಿದ್ದಾರೆ. ರಾಘವೇಂದ್ರ ರೆಡ್ಡಿ Raghavendra Reddy ಸಿನಿಮಾ ನಿರ್ಮಾಣ ಮಾಡಿದ್ದು, ಎಂ.ಎಲ್. ಪ್ರಸನ್ನ M.L.Prasanna ಅವರ ನಿರ್ದೇಶನ ಚಿತ್ರಕ್ಕಿದೆ.
ಏಳನೇ ತರಗತಿ ವಿದ್ಯಾರ್ಥಿನಿಯ ಕನಸಿನ ಕಥೆ
ಭಾರತಿ ಎನ್ನುವಂತಹಾ ಏಳನೇ ತರಗತಿ ವಿದ್ಯಾರ್ಥಿನಿಯ, ತನ್ನೂರಿನ ಎಲ್ಲರಿಗೂ ಕನ್ನಡ ಓದಲು, ಬರಿಯಲು ಬರಬೇಕು ಎನ್ನುವ ಕನಸಿಗೆ ಮೇಷ್ಟ್ರು ಜೊತೆಗೂಡುತ್ತಾರೆ, ಧೈರ್ಯಕೊಡುತ್ತಾರೆ. ಇದನ್ನು ಸಾಧಿಸುವಲ್ಲಿ ಆ ಪುಟ್ಟ ಹುಡುಗಿ ಅನುಭವಿಸುವ ಏಳು, ಬೀಳು, ನೋವು, ನಲಿವು, ಉತ್ಸಾಹಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅಂತಿಮ ಹಂತದ ಚಿತ್ರೀಕರಣ ಬಾಕಿ ಇದ್ದು, ಆದಷ್ಟು ಶೀಘ್ರದಲ್ಲಿ ಮುಗಿಸುವ ತಯಾರಿಯಲ್ಲಿದೆ ಚಿತ್ರತಂಡ.
ಸಿಹಿಕಹಿ ಚಂದ್ರು, ಸಂತೋಷ್ ಲಾಡ್ ಜೊತೆಯಲ್ಲಿ ಭಾರತಿಯಾಗಿ ಯಶಿಕಾ, ಗೋವಿಂದೇ ಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರೋಹಿತ್ ರಾಘವೇಂದ್ರ, ಸೌಜನ್ಯಾ ಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ತಾರಾಗಣದಲ್ಲಿದ್ದಾರೆ.