- ಬಿಗ್ ಬಾಸ್ ಕನ್ನಡ ಸೀಸನ್ 12: ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಇಬ್ಬರು ಔಟ್! ಬಿಗ್ ಬಾಸ್ ಮನೆಯಲ್ಲಿ ಹೊಸ ಟ್ವಿಸ್ಟ್?
- ಬಿಗ್ ಬಾಸ್ ಮೂರನೇ ವಾರದಲ್ಲೇ ನಡೆಯಲಿದೆ “ಮಿಡ್ ಸೀಸನ್ ಫಿನಾಲೆ”
- ವೈಲ್ಡ್ ಕಾರ್ಡ್ ಎಂಟ್ರಿಗಳ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ
ಬಿಗ್ ಬಾಸ್ ಸೀಸನ್ 12 Bigboss Season 12 BBK12 ಪ್ರತೀ ದಿನವೂ ಸದ್ದು ಮಾಡ್ತಿದೆ. ಸೀಸನ್ ಆರಂಭವಾದ ಮೊದಲ ದಿನದಿಂದಲೇ ಸ್ಪರ್ಧಿಗಳಿಗೆ ಭಾರೀ ಶಾಕ್ ಜೊತೆಗೆ ಟ್ವಿಸ್ಟಿಂಗ್ ಸನ್ನಿವೇಶಗಳು ಎದುರಾಗಿವೆ. ಇದೀಗ ಅಚ್ಚರಿಯ ಎಲಿಮಿನೇಷನ್ಗಳು ಮತ್ತು ಅನಿರೀಕ್ಷಿತ ತೀರ್ಮಾನಗಳಿಂದ ಬಿಗ್ ಬಾಸ್ ಟ್ರೆಂಡಿಂಗ್ ನಲ್ಲಿದೆ.
ಕಾರ್ಯಕ್ರಮ ಆರಂಭವಾದ ಕೆಲವೇ ಗಂಟೆಗಳಲ್ಲಿ ಸ್ಪರ್ಧಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಆಚೆ ಹೋಗಿದ್ದರೆ, ನಂತರ ವೀಕೆಂಡ್ನಲ್ಲಿ ಮತ್ತೆ ಅವರ ಎಂಟ್ರಿ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿತ್ತು. ಇದೇ ವೇಳೆ ಬಿಗ್ ಬಾಸ್ ಮೂರನೇ ವಾರದಲ್ಲೇ “ಮಿಡ್ ಸೀಸನ್ ಫಿನಾಲೆ”ನಡೆಯಲಿದೆ ಎಂದು ಘೋಷಣೆ ಮಾಡಿದ್ದು, ಶೋ ಇನ್ನಷ್ಟು ಕುತೂಹಲದತ್ತ ಸಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿ?
ಇದೀಗ ಬಿಗ್ ಬಾಸ್ ಕಡೆಯಿಂದ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಈ ವಾರವೇ ಮಿಡ್ ಸೀಸನ್ ಮೊದಲ ಫೈನಲ್ ನಡೆಯಲಿದ್ದು, ಮನೆ ಅರ್ಧಕ್ಕಿಂತ ಹೆಚ್ಚು ಖಾಲಿಯಾಗುವ ಸಾಧ್ಯತೆ ಇದೆ. ಹೊರ ಹೋಗುವಷ್ಟು ಮಂದಿ ಸ್ಪರ್ಧಿಗಳಿಗೆ ಬದಲಾಗಿ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಡಾಗ್ ಸತೀಶ್ ಮತ್ತು ಮಂಜು ಭಾಷಿಣಿ ಔಟ್?
ಈಗಾಗಲೇ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಡಾಗ್ ಸತೀಶ್ ಮತ್ತು ಮಂಜು ಭಾಷಿಣಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಬುಧವಾರ ಈ ಎಲಿಮಿನೇಷನ್ ನಡೆದಿದ್ದು, ಗುರುವಾರದ ಎಪಿಸೋಡ್ನಲ್ಲಿ ಇದು ಪ್ರಸಾರ ಕಾಣಲಿದೆ. ಈ ಮಿಡ್ ವೀಕ್ ಎಲಿಮಿನೇಷನ್ ನಂತರ, ಬಿಗ್ ಬಾಸ್ ಮನೆಯಲ್ಲಿ ಇನ್ನೂ ಏನೆಲ್ಲಾ ಟ್ವಿಸ್ಟ್ಗಳು ಎದುರಾಗುತ್ತವೆ ಎಂಬುದರತ್ತ ಪ್ರೇಕ್ಷಕರ ಕಣ್ಣು ನೆಟ್ಟಿದೆ. ಮುಂದಿನ ವೀಕೆಂಡ್ನಲ್ಲಿ ನಡೆಯಲಿರುವ ಮಿಡ್ ಸೀಸನ್ ಫಿನಾಲೆ ಮತ್ತು ವೈಲ್ಡ್ ಕಾರ್ಡ್ ಎಂಟ್ರಿಗಳ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.


