- ಹಾರಲು ಸಿದ್ದವಾದ “ಬಿಳಿಚುಕ್ಕಿ ಹಳ್ಳಿಹಕ್ಕಿ”, ಅಕ್ಟೋಬರ್ 24ರಂದು ತೆರೆಗೆ
- ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರ ನಿರ್ಮಾಣ, ನಿರ್ದೇಶನ, ನಟನೆಯ ಚಿತ್ರ
- ಇದೇ ಅಕ್ಟೋಬರ್ 24ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.
ತೀರಾ ಭಿನ್ನವಾದ ಕಥಾ ಸ್ವಾರಸ್ಯವಿರುವ, ಕನ್ನಡದ ಒಂದಷ್ಟು ಪ್ರೇಕ್ಷಕ ವರ್ಗ ಇಷ್ಟಪಡುವ ನಿರೂಪಣೆಯಿರುವ ಸಿನಿಮಾವೊಂದು ಕನ್ನಡಕ್ಕೆ ಬಂದಿದೆ. ಈ ಸಿನಿಮಾದ ಹೆಸರು “ಬಿಳಿಚುಕ್ಕಿ ಹಳ್ಳಿಹಕ್ಕಿ” Bilichukki Hallihakki. ಮಹಿರಾ ಖ್ಯಾತಿಯ ಮಹೇಶ್ ಗೌಡ Mahesh Gowda ಅವರು ನಿರ್ಮಾಣ, ನಿರ್ದೇಶನ ಮಾಡಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಬಿಳಿಚುಕ್ಕಿ ಹಳ್ಳಿಹಕ್ಕಿ” ಚಿತ್ರ ಈಗಾಗಲೇ ಪೋಸ್ಟರ್ ಮೂಲಕ ಸುದ್ದಿ ಮಾಡಿದೆ. ಇದೇ ಅಕ್ಟೋಬರ್ 24ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.
ಭಿನ್ನ ಬಗೆಯ ಸಿನಿಮಾ
“ಬಿಳಿಚುಕ್ಕಿ ಹಳ್ಳಿಹಕ್ಕಿ” ಭಿನ್ನ ಬಗೆಯ ಸಿನಿಮಾ. ನಮ್ಮ ಸುತ್ತಮುತ್ತಲೇ ವಿಟಿಲಿಗೋ ಅಂದರೆ “ತೊನ್ನು” ಎಂಬ ಚರ್ಮ ಬಾಧೆ ಅನೇಕರನ್ನು ಆವರಿಸಿಕೊಂಡಿರುತ್ತೆ. ಅಂಥಹದ್ದೊಂದು ಕಾಯಿಲೆಯ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ತೊನ್ನು ರೋಗದ ಸುತ್ತ ಅಲ್ಲಲ್ಲಿ ಹರಡಿರುವ ನಂಬಿಕೆ, ಅಪನಂಬಿಕೆಗಳನ್ನು ಈ ಸಿನಿಮಾ ಹೇಳುವ ಪ್ರಯತ್ನ ಮಾಡಿದೆ.
ಹೊನ್ನುಡಿ ಪ್ರೊಡಕ್ಷನ್ಸ್ Honnudi Productions ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ Kajal Kundar ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ನಟಿಸಿದ್ದು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರವನ್ನು ಎಲ್ಲರೂ ನೋಡುವ ಹಾಗೆ ಮನೋರಂಜನಾ ದಾಟಿಯಲ್ಲೇ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ