- ದ್ವಿಭಾಷಾ ಸಿನಿಮಾ “ಟಾಸ್” ಟೈಟಲ್ ಟೀಸರ್ ಅನಾವರಣ
- ಕಿಂಗ್ ಆಫ್ ಆಕ್ಷನ್ ಅರ್ಜುನ್ ಕಾಪಿಕಾಡ್ ಅವರ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದೆ “ಟಾಸ್”
- ಇತ್ತೀಚೆಗೆ ರಿಲೀಸ್ ಆಗಿದೆ ತುಳು, ಕನ್ನಡ ದ್ವಿಭಾಷಾ ಚಿತ್ರದ ಟೈಟಲ್ ಟೀಸರ್
ಅವಿಕಾ ಪ್ರೊಡಕ್ಷನ್ Avika Production ಬ್ಯಾನರ್ ಅಡಿಯಲ್ಲಿ ಸಾಗರ್ ಪೂಜಾರಿ ನಿರ್ಮಾಣ ಮಾಡುತ್ತಿರುವ, ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ “ಟಾಸ್” Toss ಇದರ ಟೈಟಲ್ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ತೆಲಿಕೆದ ಬೊಳ್ಳಿ ಎಂದೇ ಫೇಮಸ್ ಆಗಿರುವ ದೇವದಾಸ್ ಕಾಪಿಕಾಡ್ Devadas Kapikad ಅವರ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಇರುವ ಈ ಚಿತ್ರಕ್ಕೆ ಕಿಂಗ್ ಆಫ್ ಆಕ್ಷನ್ ಅರ್ಜುನ್ ಕಾಪಿಕಾಡ್ Arjun Kapikad ಅವರ ನಟನೆ ಹಾಗೂ ನಿರ್ದೇಶನವಿದೆ.
ಆಕ್ಷನ್ ಸಿನಿಮಾವಾಗಿರಲಿದೆ “ಟಾಸ್”
ಟೈಟಲ್ ಟೀಸರ್ ನೋಡಿದರೆ ಇದೊಂದು ಆಕ್ಷನ್ ಸಿನಿಮಾ ಎಂಬ ಸುಳಿವು ಪ್ರೇಕ್ಷಕರಿಗೆ ದೊರಕುತ್ತಿದ್ದು, ನಿರ್ದೇಶಕ ಅರ್ಜುನ್ ಕೂಡಾ ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ ಸ್ಟಾರ್ ನಟರೊಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆಂಬ ಮಾಹಿತಿಯೂ ಇದೆ. ಪ್ರಾದೇಶಿಕ ಭಾಷೆಯಾದರೂ ತುಳು ಚಿತ್ರರಂಗದಲ್ಲೂ ಬೇರೆ ಭಾಷಾ ಸಿನಿಮಾಗಳಿಗೂ ಪೈಪೋಟಿ ನೀಡುವಂತಹಾ ಅದ್ಭುತ ಸಿನಿಮಾಗಳು ಇತ್ತೀಚೆಗೆ ತೆರೆ ಮೇಲೆ ಬರುತ್ತಿವೆ. ಸಿನಿಮಾ ನಿರ್ಮಾಪಕರೂ ಹೊಸರೀತಿಯ ಚಿತ್ರಗಳಿಗೆ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಟಾಸ್ ಸಿನಿಮಾದ ಮೇಲಿನ ನಿರೀಕ್ಷೆಯೂ ಹೆಚ್ಚಿದೆ.
ವರ್ಷಾಂತ್ಯಕ್ಕೆ ತೆರೆ ಮೇಲೆ
ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರೋಷನ್ ಶೆಟ್ಟಿ ಮುಂತಾದ ಪ್ರಸಿದ್ಧರು ನಟಿಸಲಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತವಿದೆ. ಜೋಯೆಲ್ ಶಮನ್ ಡಿಸೋಜಾ ಅವರ ಛಾಯಾಗ್ರಹಣವಿರಲಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ವರ್ಷಾಂತ್ಯಕ್ಕೆ ತೆರೆ ಮೇಲೆ ಬರುವ ನಿರೀಕ್ಷೆಯಿದೆ.