- “ಟಾಕ್ಸಿಕ್” ಗೆ ಕಿಕ್ ಕೊಡಲಿದ್ದಾರೆ ಬಿಂದಾಸ್ ಬ್ಯೂಟಿ ಕಿಯಾರಾ?
- ರಾಕಿಭಾಯ್ ಯಶ್ ನಟನೆಯ ಚಿತ್ರ ಟಾಕ್ಸಿಕ್
- 60-70 ರ ದಶಕದ ಗೋವಾದ ಡ್ರಗ್ ಮಾಫಿಯಾದ ಸುತ್ತ ಸುತ್ತಲಿದೆ ಚಿತ್ರದ ಕಥೆ
ರಾಕಿ ಭಾಯ್ ಯಶ್ Yash ಹುಟ್ಟಿದ ದಿನದ ಕೊಡುಗೆಯಾಗಿ ಟಾಕ್ಸಿಕ್ ಚಿತ್ರದ Toxic Movie ಗ್ಲಿಂಪ್ಸ್ ಹೊರಬಿಟ್ಟಿದ್ದು ಭರ್ಜರಿ ವ್ಯೂಸ್ ಪಡೆದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಸಿನಿಪ್ರಿಯರಲ್ಲಿ ಹುಟ್ಟಿಸಿದೆ. ಈ ಚಿತ್ರದ ಚಿತ್ರೀಕರಣ ಒಂದು ತಿಂಗಳು ಅದ್ಧೂರಿಯಾಗಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆದಿತ್ತು. ಅನಂತರ ಈಗ ಮತ್ತೆ ಗೋವಾದಲ್ಲಿ Goa ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಚಿತ್ರದ ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಗುಟ್ಟಾಗಿದೆ ತಾರಾಗಣ!
ಅಕ್ಷಯ್ ಒಬೆರಾಯ್, ನಯನತಾರಾ ಮುಂತಾದವರು ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಹೊರಬಿದ್ದಿತ್ತು. ಈ ಬೆನ್ನಲ್ಲೇ ಯಶ್ Yash ಹಾಗೂ ಕಿಯಾರಾ Kiara ಸೆಟ್ ಗೆ ಹೋಗಿ ಬರುತ್ತಿರುವ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗುತ್ತಿದ್ದು, ಇವರಿಬ್ಬರೂ ಒಟ್ಟಿಗೆ ಚಿತ್ರದ ಹಾಡೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿ ಬಳಗದಲ್ಲಿ ಗುಲ್ಲೆದ್ದಿದೆ. ಗಣೇಶ್ ಆಚಾರ್ಯ ಮಾಸ್ಟರ್ ಡ್ಯಾನ್ಸ್ ಕೋರಿಯೋಗ್ರಫಿ ಮಾಡುತ್ತಿದ್ದಾರೆಂಬ ಸುದ್ದಿ ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಳಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ Geethu Mohan Das ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರು Ravi Basrur ಅವರ ಸಂಗೀತ ಸಂಯೋಜನೆಯಿದೆ. ಹಾಲಿವುಡ್ ತಂತ್ರಜ್ಞರೂ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸ್ವತಃ ತಾವೇ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 250 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಈ ವರ್ಷಾಂತ್ಯದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.