ಸ್ನೇಹದ ಸೌಧ ಕಟ್ಟುವ “ಕುಚುಕು” ಮೂವಿ ಫೆ. 14 ರಂದು ತೆರೆಗೆ

Date:

  • ಸ್ನೇಹದ ಸೌಧ ಕಟ್ಟುವ “ಕುಚುಕು” ಮೂವಿ ಫೆ. 14 ರಂದು ತೆರೆಗೆ
  • ಅರ್ಜುನ್, ಬಸವರಾಜ್ ಕುಮಾರ್ ನಾಯಕತ್ವದ ಸಿನಿಮಾ
  • ಮೈಸೂರು ರಾಜು ನಿರ್ದೇಶನದ, ಸ್ನೇಹದ ಮಹತ್ವ ಸಾರುವ ಚಿತ್ರ ಇದಾಗಿದೆ.

ವ್ಯಕ್ತಿಯೊಬ್ಬನ ಜೀವನದಲ್ಲಿ ಆತನ ಕುಟುಂಬ ಹೇಗೆ ಮುಖ್ಯವಾಗತ್ತೋ ಹಾಗೇ ಹಲವು ಸಂದರ್ಭಗಳಲ್ಲಿ ಫ್ರೆಂಡ್ಸ್ ಕೂಡಾ ಕುಟುಂಬದವರಂತೇ ಮಹತ್ವ ಹೊಂದಿರುತ್ತಾರೆ. ಇಂತಹಾ ಗೆಳೆತನಕ್ಕೆ ಭದ್ರ ಬುನಾದಿ ಇದ್ರೆ ಗೆಳೆತನ ಶಾಶ್ವತವಾಗಿರತ್ತೆ. ನಾಗರತ್ನಮ್ಮ ನಿರ್ಮಾಣ ಮಾಡುತ್ತಿರುವ ಗೆಳೆತನದ ಕುರಿತಾದ ಚಿತ್ರ “ಕುಚುಕು” Kuchuku Movie ಇದೇ ಫೆಬ್ರವರಿ 14, ಪ್ರೇಮಿಗಳ ದಿನದಂದು ತೆರೆಗೆ ಬರುತ್ತಿದೆ.

ಸ್ನೇಹಿತನ ಪಾತ್ರದಲ್ಲಿ ನಟನೆ ಮಾಡಿರುವ ಅರ್ಜುನ್ Arjun ಅವರಿಗೆ ಇದು ಮೂರನೇ ಚಿತ್ರವಾಗಿದ್ದು,ಇನ್ನೊಬ್ಬ ಸ್ನೇಹಿತನ ಪಾತ್ರದಲ್ಲಿ ಬಸವರಾಜ್ ಕುಮಾರ್ Basavaraj Kumar ನಟನೆ ಮಾಡಿದ್ದಾರೆ. ಪ್ರಿಯದರ್ಶಿನಿ ಚಿತ್ರದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರದಲ್ಲಿ ಶಿವಾಜಿ ನಟಿಸಿರುತ್ತಾರೆ. ಸ್ನೇಹದ ಕಥಾಹಂದರ, ಸೆಂಟಿಮೆಂಟ್ಸ್ ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಮೈಸೂರು ಸುತ್ತಲಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಮೈಸೂರು ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಐದು ಹಾಡುಗಳಿರುವ ಈ ಚಿತ್ರದ ಸಂಗೀತ ನಿರ್ದೇಶನ ಎ.ಟಿ.ರವೀಶ್ A T Raveesh ಅವರದ್ದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...