- ಕ್ಯಾಪಿಟಲ್ ಸಿಟಿ ಚಿತ್ರದ ಟ್ರೇಲರ್ ರಿಲೀಸ್.!
- ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ ಸಿನಿಮಾ
ಆರ್ ಅನಂತರಾಜು ನಿರ್ದೇಶನದ ಕ್ಯಾಪಿಟಲ್ ಸಿಟಿ ಸಿನಿಮಾದ ಟ್ರೇಲರ್ Capital city movie trailer release ಹಾಗೂ ಹಾಡುಗಳು ರಿಲೀಸ್ ಆಗಿದ್ದು, ಚಿತ್ರದ ಟ್ರೇಲರ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರವು ಆಕ್ಷನ್ ದೃಶ್ಯಗಳಿಂದ ಕೂಡಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.
ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ ಸಿನಿಮಾ;
ಇನ್ನು ಚಿತ್ರವನ್ನು ಕನ್ನಡದ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನ ಮಾಡಿದ್ದು, ನಾಯಕರಾಗಿ ರಾಜೀವ್ ರೆಡ್ಡಿ ನಟಿಸಿದ್ದಾರೆ. “ಕ್ಯಾಪಿಟಲ್ ಸಿಟಿ” ಚಿತ್ರದ ಹಾಡುಗಳನ್ನು ಜಯನಗರ ವಿಧಾನಸಭಾ ಸದಸ್ಯರಾದ ಸಿ.ಕೆ.ರಾಮಮೂರ್ತಿ, ಬಿ.ಜೆ.ಪಿ ಮುಖಂಡರಾದ ರೇಣುಕಾಚಾರ್ಯ ಅನಾವರಣ ಮಾಡಿದರು.

ಸಿನಿಮಾ ಬಿಡುಗಡೆ ಮತ್ತು ನಿರೀಕ್ಷೆಗಳು:
2025ರ ಜನವರಿ ಅಂತ್ಯದ ವೇಳೆಗೆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿಸುತ್ತಿವೆ.