- ತೆರೆಗೆ ಬರಲಿದೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಕ್ಯಾನ್ಸರ್ ಹೋರಾಟದ ನೋವಿನ ಕಥನ “ಸರ್ವೈವರ್”
- ಈ ಡಾಕ್ಯು ಡ್ರಾಮಾದಲ್ಲಿ ರೋಗ ಪತ್ತೆಯಾದಂದಿನಿಂದ ಹಿಡಿದು ಚೇತರಿಕೆಯವರೆಗಿನ ಅವರ ಪ್ರಯಾಣದ ಕಥನವಿರಲಿದೆ.
- ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿರುವ ಚಿತ್ರವನ್ನು, ಪ್ರದೀಪ್ ಕೆ ಶಾಸ್ತ್ರಿ ನಿರ್ದೇಶಿಸಲಿದ್ದಾರೆ.
ಹ್ಯಾಟ್ರಿಕ್ ಹೀರೋ Hatrick Hero, ಸೆಂಚುರಿ ಸ್ಟಾರ್ Century Star ಶಿವರಾಜ್‌ಕುಮಾರ್ Shivaraj Kumar ಇದೀಗ ತಮ್ಮ ಜೀವನದ ನೋವಿನ ಪಯಣವನ್ನು ತೆರೆಯ ಮೇಲೆ ಹಂಚಿಕೊಳ್ಳಲಿದ್ದಾರೆ. ಆ ಮೂಲಕ ನೋವಿನ ಹೋರಾಟ ಮತ್ತು ಕಥನವನ್ನು ಲೋಕಕ್ಕೆ ತೋರಿಸಲಿದ್ದಾರೆ. ಹೌದು ಶಿವರಾಜ್ ಕುಮಾರ್ ಕ್ಯಾನ್ಸರ್‌ನೊಂದಿಗಿನ ತಮ್ಮ ಹೋರಾಟವನ್ನೇ ತೆರೆಮೇಲೆ ತೋರಿಸಲಿದ್ದಾರೆ. ಡಾಕ್ಯು-ಡ್ರಾಮಾ Docu Drama ಆಗಿರುವ “ಸರ್ವೈವರ್” “Survivor” ಎನ್ನುವ ಚಿತ್ರದಲ್ಲಿ, ತಮ್ಮ ನಿಜ ಜೀವನದ ಹೋರಾಟದ ಕುರಿತು ಹೇಳಲಿದ್ದಾರೆ. ಈ ಡಾಕ್ಯು ಡ್ರಾಮಾದಲ್ಲಿ ರೋಗ ಪತ್ತೆಯಾದಂದಿನಿಂದ ಹಿಡಿದು ಚೇತರಿಕೆಯವರೆಗಿನ ಅವರ ಪ್ರಯಾಣದ ಕಥನವಿರಲಿದೆ. ಪ್ರಪ್ರಥಮ ಬಾರಿಗೆ ಶಿವರಾಜಕುಮಾರ್ ಡಾಕ್ಯು ಡ್ರಾಮಾ ಮಾದರಿಯಲ್ಲಿ ಶಿರಾಜಕುಮಾರ್ ಅವರ ಕತೆ ಬರಲಿದೆ.
ನಿಜ ಪಾತ್ರಗಳನ್ನೇ ಚಿತ್ರದಲ್ಲಿ ತೋರಿಸುವ ಸಾಧ್ಯತೆ
ಗೀತಾ ಪಿಕ್ಚರ್ಸ್ Geetha Pictures ಬ್ಯಾನರ್ ಅಡಿಯಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ನಿರ್ಮಿಸಲಿರುವ “Survivor” ಚಿತ್ರವನ್ನು, ಪ್ರದೀಪ್ ಕೆ ಶಾಸ್ತ್ರಿ Pradeep K Shastri ನಿರ್ದೇಶಿಸಲಿದ್ದಾರೆ. ಇಲ್ಲಿ ಶಿವರಾಜ್‌ಕುಮಾರ್ ಅವರ ನೈಜ ಜೀವನ ಶೈಲಿ, ಅವರ ಆ್ಯಕ್ಷನ್ ದೃಶ್ಯಗಳು, ಹಾಡುಗಳು ಮತ್ತು ವಿಭಿನ್ನ ಗುಣಗಳ ದೃಶ್ಯ ಸಂಯೋಜನೆ ಇರಲಿದೆ. ಸಾಕ್ಷ್ಯ ಚಿತ್ರವಾಗಿರುವುದರಿಂದ ನಿಜ ಪಾತ್ರಗಳನ್ನೇ ಚಿತ್ರದಲ್ಲಿ ತೋರಿಸುವ ಸಾಧ್ಯತೆ ಇರುವುದರಿಂದ ಶಿವಣ್ಣರ ಆಪ್ತ ಬಳಗದಲ್ಲಿರುವವರು, ನಟರು, ಕುಟುಂಬದ ಸದಸ್ಯರು, ಸ್ನೇಹಿತರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ
ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಸಾಕ್ಷ್ಮಚಿತ್ರವಾಗಿದ್ದರೂ ಸಿನಿಮಾ ಶೈಲಿ ಇಲ್ಲಿರಲಿದೆ. ನೈಜ ಘಟನೆಗಳು, ಭಾವನಾತ್ಮಕ ಸನ್ನಿವೇಶಗಳು, ಕುಟುಂಬದೊಂದಿಗಿನ ಒಡನಾಟಗಳು, ಮಾತು ಹರಟೆ ಇವೆಲ್ಲಾ ಈ ಸಾಕ್ಷ್ಯಚಿತ್ರದ ಹೈಲೈಟ್. ಸುಮಾರು 25-30 ದಿನಗಳ ವೇಳಾಪಟ್ಟಿಯಲ್ಲಿ ಚಿತ್ರವನ್ನು ಚಿತ್ರೀಕರಿಸಲು ಚಿತ್ರತಂಡ ಯೋಜಿಸಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ಯಾನ್ಸರ್ ಹೇಗೆ ಎದುರಿಸಿದರು, ಹೇಗೆ ಮೆಟ್ಟಿ ನಿಂತರು ಹೀಗೆ ಎಲ್ಲವನ್ನೂ ತೆರೆಯ ಮೇಲೆ ನೋಡುವ ಅವಕಾಶ, ಶಿವಣ್ಣ ಅಭಿಮಾನಿಗಳಿಗೊಂದು ಭಾವನಾತ್ಮಕ ಕ್ಷಣವಾಗಲಿದೆ. ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಕೂಡ ಚಿತ್ರತಂಡಕ್ಕಿದೆ.