- ರಿಯಾಲಿಟಿ ಶೋ ನಲ್ಲಿ ಚಾಮುಂಡೇಶ್ವರಿಗೆ ಅವಮಾನ, ರಕ್ಷಕ್ ವಿರುದ್ಧ ಆರೋಪ
- ಬಹುಜನರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆಂದು ರಕ್ಷಕ್ ವಿರುದ್ಧ ದೂರು ನೀಡಲು ಚಿಂತನೆ
- ರಕ್ಷಕ್ ಕ್ಷಮೆಯಾಚಿಸಲೇಬೇಕು ಎಂದು ಪಟ್ಟು ಹಿಡಿದ ಮುಖಂಡರು
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ಣುಡಿಯೇ ಇದೆ. ರಿಯಾಲಿಟಿ ಶೋಗಳಲ್ಲಿ Reality Show ಶೋಕಿಗೋಸ್ಕರವೋ, ಇತರರನ್ನು ಮೆಚ್ಚಿಸಬೇಕೆಂಬ ಉದ್ದೇಶದಿಂದ, ಟಿವಿ ಚಾನೆಲ್ ಗಳ ಟಿ.ಆರ್.ಪಿ. ಹೆಚ್ಚಿಸಬೇಕೆಂಬ ಯೋಜನೆಯಿಂದ ಕೆಲವೊಮ್ಮೆ ಮಾತಿನ ಮೇಲೆ ಹಿಡಿತವೇ ಇರುವುದಿಲ್ಲ. ನಮ್ಮ ಮಾತಿನಿಂದ ಇತರರಿಗೆ ನೋವುಂಟಾಗುತ್ತದೆ ಎಂಬ ಕನಿಷ್ಟ ಯೋಚನೆಯೂ ಮಾಡದೇ ಎಲ್ಲೆ ಮೀರಿ ಮಾತನಾಡುವ ಪರಿಸ್ಥಿತಿ ಬಂದೊದಗುತ್ತದೆ. ಇದೇ ವಿಷಯಕ್ಕೆ ಈಗ ರಿಯಾಲಿಟಿ ಶೋ ಒಂದರ ಸ್ಪರ್ಧಿ “ರಕ್ಷಕ್ ಬುಲೆಟ್” Rakshak Bullet ಸುದ್ದಿಯಲ್ಲಿದ್ದಾರೆ.
ಏನ್ ಹೇಳಿದ್ರು ರಕ್ಷಕ್?
ಹಿರಿಯ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ರಿಯಾಲಿಟಿ ಶೋ ಒಂದರ ಸ್ಕಿಟ್ ನಲ್ಲಿ ಸಹನಟಿಗೆ “ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾರೆ ಅನ್ನಿಸ್ತಿದೆ” ಎಂದು ಡೈಲಾಗ್ ಹೊಡೆದಿದ್ದಾರೆ. ಇದು ಸೋಷಿಯಲ್ ಮೀಡಿಯಾ ಗಳಲ್ಲಿ ಫುಲ್ ವೈರಲ್ ಆಗ್ತಿದ್ದು, ಸಹನಟಿಗೆ ಡೈಲಾಗ್ ಮೂಲಕ ಹೊಗಳುವ ಭರದಲ್ಲಿ ರಕ್ಷಕ್ ಯಡವಟ್ಟು ಮಾಡಿಕೊಂಡಿದ್ದಾರೆ. ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.
ದೂರು ನೀಡಲು ಮುಂದಾಗಿದ್ದಾರೆ ಮುಖಂಡರು
ಚಾಮುಂಡಿ ಬೆಟ್ಟಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಲ್ಲದೇ, ಕೂಡಲೇ ರಕ್ಷಕ್ ಬಹಿರಂಗ ಕ್ಷಮೆಯಾಚಿಸಬೇಕು ಮಾತ್ರವಲ್ಲದೇ, ರಕ್ಷಕ್ ಬುಲೆಟ್ ವಿರುದ್ಧ ಇಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ. ಶೋ ನ ನಿರ್ದೇಶಕರು ಹಾಗೂ ಜಡ್ಜ್ ಗಳ ವಿರುದ್ಧವೂ ಕಿಡಿಕಾರಿರುವ ಹಿಂದೂ ಸಂಘಟನೆಗಳು ನಾಡದೇವತೆಗೆ ಮಾಡಿರುವ ಅಪಮಾನ ಒಂದಷ್ಟು ವಿವಾದಕ್ಕೆ ಕಾರಣವಾಗ್ತಿದೆ.