ಕಾಂತಾರ ಚಾಪ್ಟರ್ 1 ಕ್ಕೆ ಪೈಪೋಟಿ ನೀಡಲು ಕಾಯ್ತಿದೆ ಬಾಲಿವುಡ್ ನ ಈ ಸಿನಿಮಾ !

Date:

  • ಕಾಂತಾರ ಚಾಪ್ಟರ್ 1 ಕ್ಕೆ ಪೈಪೋಟಿ ನೀಡಲು ಕಾಯ್ತಿದೆ ಬಾಲಿವುಡ್ ನ ಈ ಸಿನಿಮಾ !
  • ಕಾಂತಾರ ಚಾಪ್ಟರ್ 1 ಹವಾಗೆ ಬಾಲಿವುಡ್ ಕೂಡ ಪುಕು ಪುಕು!
  • “ಜಾಲಿ ಎಲ್ಎಲ್ಬಿ 3” ಅಕ್ಟೋಬರ್ 2 ರಂದು ತೆರೆ ಕಾಣುವ ಸಾಧ್ಯತೆ ಇದೆ.

ದಿನೇ ದಿನೇ “ಕಾಂತಾರ ಚಾಪ್ಟರ್ 1” Kanthara Chapter 1 ಸದ್ದು ಮಾಡ್ತಿದೆ. ಕಾಂತಾರ ಮೊದಲ ಭಾಗವನ್ನು ಇತರ ರಾಜ್ಯಗಳ ಜನರೂ ನೋಡಿ ಥ್ರಿಲ್ಲ್ ಆಗಿದ್ರು. ಕಾಂತಾರ ರಿಲೀಸ್ ಆದಾಗ ಬಾಲಿವುಡ್ ನ ಕೆಲವು ಸಿನಿಮಾಗಳು ಸದ್ದು ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಕಾಂತಾರ ಚಾಪ್ಟರ್ 1 ಡೇಟ್ ಅನೌನ್ಸ್ ಆಗಿದ್ದೇ ತಡ, ಬಾಲಿವುಡ್ Bollywood ನ ಕೆಲವು ಬಹುನಿರೀಕ್ಷಿತ ಸಿನಿಮಾ ಒಂದು ಅದೇ ದಿನ ರಿಲೀಸಾಗಿ ಕಾಂತಾರ 1 ಗೆ ಪೈಪೋಟಿ ನೀಡಲು ತುದಿಗಾಲಲ್ಲಿ ಕಾಯುತ್ತಿದೆ ಎನ್ನಲಾಗಿದೆ. ಹೌದು, ನಟ ಅಕ್ಷಯ್ ಕುಮಾರ್ Akshay Kumar ನಟಿಸಿರುವ ಬಹುನಿರೀಕ್ಷಿತ “ಜಾಲಿ ಎಲ್ಎಲ್ಬಿ 3” Jolly LLB 3 ಅಕ್ಟೋಬರ್ 2 October ರಂದು, ಅಂದ್ರೆ “ಕಾಂತಾರ ಚಾಪ್ಟರ್ 1” ರಿಲೀಸ್ ಆಗುವ ದಿನವೇ ತೆರೆ ಕಾಣುವ ಸಾಧ್ಯತೆ ಇದೆ. ಹಾಗಾಗಿ ಕಾಂತಾರ ಚಾಪ್ಟರ್ 1 ಗೆ ಚಿತ್ರಮಂದಿರಗಳು ಸಿಗದಂತೆ ಮಾಡಲು ಅಕ್ಷಯ್ ಕುಮಾರ್ ಪ್ಲಾನ್ ರೂಪಿಸಿದ್ದಾರೆ ಎನ್ನುವ ಗುಲ್ಲು ಇದೀಗ ಲೈಟಾಗಿ ಕೇಳಿಬರುತ್ತಿದೆ.

ಜಾಲಿ ಎಲ್ ಎಲ್ ಬಿ 1 ಮತ್ತು 2 ಈ ಹಿಂದೆ ಸಖತ್ ಹಿಟ್ ಚಿತ್ರವಾಗಿ ಇತಿಹಾಸ ಬರೆದಿತ್ತು. ಇದೀಗ ಭಾಗ 3 ನ್ನು ಕೂಡ ಹಿಟ್ ಆಗಿಸಬೇಕು ಎಂದು ಚಿತ್ರತಂಡ ಪ್ಲಾನ್ ಮಾಡಿದೆ. ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕಾರಣಾಂತರದಿಂದ ತನ್ನ ರಿಲೀಸ್ ಡೇಟ್ ನ್ನು ಮುಂದಕ್ಕೆ ಹಾಕಿತ್ತು. ಇದೀಗ ಕಾಂತರಕ್ಕೆ ಪೈಪೋಟಿ ನೀಡುವ ಉದ್ದೇಶದಿಂದ ಗಾಂಧೀಜಯಂತಿಯಂದೇ ರಿಲೀಸ್ ಮಾಡಲು ಹೊರಟಿದೆ ಎನ್ನುವ ಸುದ್ದಿ ಹರಿದಾಡಿದೆ. ಒಂದಂತೂ ನಿಜ, ಕಾಂತಾರ ಚಾಪ್ಟರ್ 1 ಗೆ ಬಾಲಿವುಡ್ ಕೂಡ ಕೊಂಚ ಭಯ ಪಟ್ಟಿದೆ ಎನ್ನುವುದು. ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಅಬ್ಬರದ ಪ್ರವೇಶ ನೀಡಲು ಸಜ್ಜಾಗಿರುವ ಕಾಂತಾರ ಚಾಪ್ಟರ್ 1 ಹೀಗೆಲ್ಲಾ ಸುದ್ದಿಯಾಗುತ್ತಿರುವುದು ಕೂಡ ಕಾಂತಾರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರಿಗೆ ಖುಷಿಯ ಸುದ್ದಿಯೇ ಆಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...