- ತಯಾರಾಗಿದೆ ಡಾರ್ಕ್ ಕಾಮಿಡಿ ಜೊತೆಗೆ ಹಾರರ್ – ಥ್ರಿಲ್ಲರ್ ಸಿನಿಮಾ “ಸೀಟ್ ಎಡ್ಜ್”
- ಕಿರುತೆರೆ, ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಯುವನಟ ಸಿದ್ದು ಮೂಲಿಮನಿ ನಟನೆಯ ಚಿತ್ರ
- ಯುವ ನಿರ್ದೇಶಕ ಚೇತನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್ R R Cinema Productions ಬ್ಯಾನರ್ ನಡಿ ಗಿರಿಧರ ಟಿ.ವಸಂತಪುರ ಮತ್ತು ಸುಜಾತ ಗಿರಿಧರ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಾರರ್ ಥ್ರಿಲ್ಲರ್ ಸಿನಿಮಾ “ಸೀಟ್ ಎಡ್ಜ್” Seat Edge ಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ ಯುವ ನಿರ್ದೇಶಕ ಚೇತನ್ ಶೆಟ್ಟಿ Chethan Shetty. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಯುವನಟ ಸಿದ್ದು ಮೂಲಿಮನಿ Siddu Moolimani ಈ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದು, ಅವರಿಗೆ ಜೋಡಿಯಾಗಿದ್ದಾರೆ ರವೀಕ್ಷಾ ಶೆಟ್ಟಿ Raeeksha Shetty. ಬೆಂಗಳೂರು, ಮೈಸೂರು, ಶಿವಮೊಗ್ಗ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಜುಲೈ ತಿಂಗಳಲ್ಲಿ ಚಿತ್ರ ತೆರೆಗೆ ತರುವ ಪ್ಲಾನ್ ಹೊಂದಿದೆ ಚಿತ್ರತಂಡ.
ಈಗಾಗಲೇ ರಿಲೀಸ್ ಆಗಿವೆ ಚಿತ್ರದ ಹಾಡುಗಳು
ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಿದ್ದು ಕೊಡಿಪುರ ಸಾಹಿತ್ಯದ ಗೀತೆಗೆ ಅರ್ಮಾನ್ ಮಲಿಕ್ Arman Malik ದನಿ ನೀಡಿದ್ದರು, ಆಕಾಶ್ ಪರ್ವ ಟ್ಯೂನ್ ಹಾಕಿದ್ದರು. ಅನಂತರ “ಸಾರಿ ಹೇಳುವೆ ಜಗಕ್ಕೆ” ಎಂಬ ಗೀತೆ ರಿಲೀಸ್ ಆಗಿದ್ದು, ಸಿದ್ದು ಹಾಗೂ ರವೀಕ್ಷಾ ಜೋಡಿಯಾಗಿ ಹೆಜ್ಜೆ ಹಾಕಿದ್ದರು. ಈ ಹಾಡಿಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ “ಹಂಗೋ ಹಿಂಗೋ” ಎಂಬ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಲಕ್ಷ್ಮಿ ರಮೇಶ್ ಸಾಹಿತ್ಯ ಇರುವ ಈ ಹಾಡಿಗೆ ಗಾಯಕ ಟಿಪ್ಪು ದನಿಯಾಗಿದ್ದಾರೆ.
ಡಾರ್ಕ್ ಕಾಮಿಡಿ, ಹಾರರ್ – ಥ್ರಿಲ್ಲರ್ ಮೂವೀ
ಯೂಟ್ಯೂಬ್ ಬ್ಲಾಗರ್ ಆಗಿರುವ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಸಾಹಸ ಮಾಡುತ್ತಾನೆ. ಅದರಲ್ಲಿ ಆತ ಏನೇನು ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದೇ ಸಿನಿಮಾದ ಕಥಾಹಂದರವಾಗಿದೆ. ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕರೇ, ಪುನೀತ್ ಬಾಬು ತೇಜು ಪೊನ್ನಪ್ಪ, ಮನಮೋಹನ್ ರೈ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ದೀಪಕ್ ಕುಮಾರ್ ಜೆ.ಕೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಸಿನಿಮಾಕ್ಕಿದೆ. ಜುಲೈ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಂಭವವಿದ್ದು, ಸಿನಿಪ್ರಿಯರು ಸೀಟ್ ಎಡ್ಜ್ ನಲ್ಲಿ ಕುಳಿತು ಸಿನಿಮಾ ನೋಡುವಂತೆ ಮಾಡುತ್ತದೆಯೇ ಕಾದು ನೋಡಬೇಕಿದೆ.