ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ (Milana Nagaraj) ಅವರು ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ದಂಪತಿಗಳಿಬ್ಬರು ಪ್ಯಾರಿಸ್‌ಗೆ ಹೋಗಿದ್ದಾರೆ. ತಮ್ಮ ಫೋಟೋವನ್ನ ಕೃಷ್ಣ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ಸ್ಟಾರ್ ಜೋಡಿಗಳಲ್ಲಿ ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಸಾಕಷ್ಟು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿ ಆದರ್ಶ ದಂಪತಿಗಳಾಗಿ ಅಭಿಮಾನಿಗಳಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಲವ್ ಮಾಕ್ಟೈಲ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಉತ್ತಮ ನಿರ್ದೇಶಕರಾಗಿ ಸೈ ಎನಿಸಿಕೊಂಡರೆ, ಪತಿಯ ಸಿನಿಮಕ್ಕೆ ಮಿಲನಾ ಕೈ ಜೋಡಿಸಿದ್ದರು.
ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ, ಪ್ಯಾರಿಸ್‌ಗೆ (Paris) ಡಾರ್ಲಿಂಗ್ ಕೃಷ್ಣ ದಂಪತಿ ಹೋಗಿದ್ದಾರೆ. ಏಪ್ರಿಲ್‌ನಲ್ಲಿ ಮಿಲನಾ ಹುಟ್ಟುಹಬ್ಬಕ್ಕೆ ಥೈಲ್ಯಾಂಡ್‌ಗೆ ಹೋಗಿದ್ದರು. ಇದೀಗ ಪ್ಯಾರಿಸ್‌ನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಕೃಷ್ಣ- ಮಿಲನಾ ಎಂಜಾಯ್ ಮಾಡ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ (Darling Krishna)ಅವರು ಲವ್ ಮಾಕ್ಟೈಲ್ 3 ,ಕೌಸಲ್ಯಾ ಸುಪ್ರಜಾ ರಾಮ, ಲವ್ ಮಿ ಹೇಟ್ ಮಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಲವ್ ಮಾಕ್ಟೈಲ್ 3, ಆರಾಮ ಅರವಿಂದ್ ಸ್ವಾಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಲನಾ ನಾಗರಾಜ್ ಅವರು ನಟಿಸಿದ್ದಾರೆ.

