- ಸೆನ್ಸಾರ್ ಪಾಸಾಗಿ ಮೇ 16 ಕ್ಕೆ ಹೊರಬರಲಿದೆ “ದಿ”
- ವಿನಯ್ ವಾಸುದೇವ್ ನಿರ್ದೇಶಿಸಿ, ನಟಿಸಿರುವ ವಿಭಿನ್ನ ಕಥಾಹಂದರದ ಚಿತ್ರ.
- ಹೆಸರಿನಿಂದಲೇ ಕುತೂಹಲ ಕೆರಳಿಸುತ್ತಿದೆ “ದಿ”
ವಿ.ಡಿ.ಕೆ ಸಿನಿಮಾಸ್ VDK Cinemas ಲಾಂಛನದಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ Vinay Vasudev ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ದಿ” Dee ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಕುತೂಹಲ, ಭಯ, ರೋಮಾಂಚಕತೆಯನ್ನು ಹುಟ್ಟಿಸುವಂತಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದ್ದು, ಮೇ 16 ರಂದು ತೆರೆಮೇಲೆ ಬರಲಿದೆ ಸಿನಿಮಾ. ವಿಜಯ್ ಸಿನಿಮಾಸ್ Vijay Cinemas ಅವರು ಈ ಸಿನಿಮಾವನ್ನು ಹಂಚಿಕೆ ಮಾಡಲಿದ್ದಾರೆ.
ಹೊಸಬರ ಹೊಸಪ್ರಯತ್ನ
ವಿನಯ್ ವಾಸುದೇವ್ ಅವರಿಗೆ ಜೋಡಿಯಾಗಿದ್ದಾರೆ ದಿಶಾ ರಮೇಶ್ Disha Ramesh. ಉಳಿದಂತೆ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ. ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ ನಾಯಕ ಅವರ ಸಂಕಲನವಿರುವ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಗಳು ಮನಮುಟ್ಟುವಂತಿದೆ.