- ಸದ್ದು ಮಾಡ್ತಿದೆ ತುಳುನಾಡಿನ ಮಣ್ಣಿನ ಸೊಗಡಿನ “ಧರ್ಮ ಚಾವಡಿ” ಟೀಸರ್
- ಬಿಡುಗಡೆಯಾಯ್ತು ದೈವಾರಾಧನೆಯ ಹಿನ್ನೆಲೆಯುಳ್ಳ ತುಳು ಸಿನಿಮಾ “ಧರ್ಮ ಚಾವಡಿ” ಟೀಸರ್
- ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಈ ಸಿನಿಮಾ
ತುಳುನಾಡಿನ ಸಂಸ್ಕೃತಿ, ಮಣ್ಣಿನ ಕತೆ, ಇಲ್ಲಿನ ದೈವಾರಾಧನೆಯ ನಂಟುಳ್ಳ ಚಿತ್ರಗಳು ಇತ್ತೀಚೆಗೆ ಜಾಸ್ತಿಯಾಗಿವೆ. ಸಿನಿಮಾ ಪ್ರಿಯರೂ ಕೂಡ ದೈವಾರಾಧನೆಯ ಕುರಿತು ಜಾಸ್ತಿ ಆಸಕ್ತಿಯಿಂದ ಸಿನಿಮಾ ನೋಡತೊಡಗಿದ್ದಾರೆ. ಇಂತಹ ದೈವಾರಾಧನೆಯ ಹಿನ್ನೆಲೆಯುಳ್ಳ ಮತ್ತೊಂದು ತುಳು ಸಿನಿಮಾ “ಧರ್ಮ ಚಾವಡಿ” ಟೀಸರ್ ಇದೀಗ ಸಖತ್ ಸದ್ದು ಮಾಡತೊಡಗಿದೆ. ಕೆಲವು ಸಮಯದ ಹಿಂದೆ “ಧರ್ಮ ದೈವ” ಎನ್ನುವ ಸಿನಿಮಾವನ್ನು ನಿರ್ದೇಶಿಸಿದ್ದ ನಿತಿನ್ ರೈ ಕುಕ್ಕುವಳ್ಳಿ Nithin Rai Kukkuvalli ಅವರು “ಧರ್ಮ ಚಾವಡಿ” Dharma Chavadi ಮೂಲಕ ಮತ್ತೆ ನಿರ್ದೇಶನದಲ್ಲಿ ಸದ್ದು ಮಾಡಿದ್ದಾರೆ.
ಜಗದೀಶ್ ಅಮೀನ್ Jagadish Amin ಮತ್ತು ರವಿ ಸ್ನೇಹಿತ್ Ravi Snehith ಅವರು ನಿರ್ಮಾಣ ಮಾಡಿರುವ ಈ ಚಿತ್ರ, ಕೃಷ್ಣವಾಣಿ ಪಿಚ್ಚರ್ಸ್ Krishnavani Pictures ಅಡಿಯಲ್ಲಿ ಮೂಡಿಬರಲಿದೆ. ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್, ದೀಪಕ್ ರೈ ಪಾಣಾಜೆ, ರಕ್ಷಣ್ ಮಾಡೂರು, ನಿಶ್ಮಿತಾ, ಚೇತನ್ ರೈ ಮಾಣಿ, ಧನ್ಯಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ರಜಾಕ್ ಪುತ್ತೂರು ಅವರ ಚಿತ್ರಕಥೆ, ಸಂಭಾಷಣೆ ಇದ್ದು, ಅರುಣ್ ರೈ ಪುತ್ತೂರು ಅವರ ಕ್ಯಾಮರಾ ಕಣ್ಣಿದೆ. ಪ್ರಸಾದ್ ಶೆಟ್ಟಿ ಸಂಗೀತವಿದೆ, ಅಂದ ಹಾಗೆ ಜುಲೈ 11 ರಂದು “ಧರ್ಮ ಛಾವಡಿ” ಸಿನಿಮಾ ತೆರೆ ಕಾಣಲಿದ್ದು ಇದೀಗ ಟೀಸರ್ ಮೂಲಕ ಕುತೂಹಲ ಸೃಷ್ಟಿಸಿದೆ.