ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ತೆರೆಮೇಲೆ ಬರಲಿದೆ “ಧೃವ 369”

Date:

  • ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ತೆರೆಮೇಲೆ ಬರಲಿದೆ “ಧೃವ 369”
  • ರಾಜ್ ಕುಮಾರ್ ಹಾಗೂ ಪುನೀತ್ ಇಬ್ಬರನ್ನೂ ವಿಶಿಷ್ಟವಾಗಿ ತೆರೆಯಲ್ಲಿ ತೋರಿಸುವ ಪ್ರಯತ್ನ ನಡೆಸಿದೆ ಚಿತ್ರತಂಡ
  • ಕುತೂಹಲ ಹುಟ್ಟು ಹಾಕ್ತಿದೆ ಜೆ.ಕೆ. ಶಂಕರ್ ನಾಗ್ ಆಕ್ಷನ್ ಕಟ್ ಹೇಳ್ತಿರೋ ಈ ಚಿತ್ರದ ಟೀಸರ್

ಕೆಲವು ದಿನಗಳ ಹಿಂದಷ್ಟೇ “ಧೃವ 369” Dhruva 369 ಚಿತ್ರದ ಟೀಸರ್ ರಿಲೀಸ್ ಆಗಿದ್ದು ಡಾ. ರಾಜ್ ಕುಮಾರ್ Dr. Raj Kumar ಹಾಗು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ Puneeth Raj Kumar ಇಬ್ಬರನ್ನೂ ವಿಶಿಷ್ಟವಾಗಿ ಬೆಳ್ಳಿತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡ್ತಾ ಇದೆ ಈ ಚಿತ್ರ ತಂಡ. ಅಚಿಂತ್ಯ ಸ್ಟುಡಿಯೋಸ್ Achinthya Studios ಬ್ಯಾನರ್ ಅಡಿಯಲ್ಲಿ ಮಂಗಳೂರಿನ ಉದ್ಯಮಿ ಶ್ರೀಕೃಷ್ಣ ಕಾಂತಿಲ್ ShriKrishna Kanthil ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಜೆ.ಕೆ. ಶಂಕರ್ ನಾಗ್ J.K.Shankar Nag ನಿರ್ದೇಶನದ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.

ಆಧುನಿಕ ತಂತ್ರಜ್ಞಾನ ಬಳಸಿ ಟೀಸರ್

ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು ಇದರಲ್ಲಿ ಶೇ. 45 ರಷ್ಟು ಗ್ರಾಫಿಕ್ಸ್ ಇದೆ. ಟೀಸರ್ ಕೂಡಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಡಲಾಗಿದ್ದು, ರಾಜ್ ಕುಮಾರ್ ಮತ್ತು ಅಪ್ಪು ಕೂಡಾ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಹಗಳ ಬಗ್ಗೆ ಯಾರಿಗೂ ತಿಳಿಯದಂತಹಾ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದಿದ್ದಾರೆ ನಿರ್ದೇಶಕರು.

ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ Raghavendra Raj Kumar, ರಮೇಶ್ ಭಟ್ Ramesh Bhat, ಸಂದೀಪ್ ಅಲ್ಮಾನಿ, ಅತೀಶ್ ಶೆಟ್ಟಿ, ಚಂದನಾ, ನಮಿತಾ ಮಾತ್ರವಲ್ಲದೇ ಮಂಗಳೂರು ಭಾಗದ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟೀಸರ್ ನೋಡಿದವ್ರಿಗಂತೂ ಸಿನಿಮಾ ಬಗ್ಗೆ ಕುತೂಹಲ ಹುಟ್ಟೋದು ಸಹಜ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ ಇನ್ನೂ...

ಟ್ರೆಂಡಿಂಗ್ ಆಗ್ತಿದೆ “ಜಾಂಟಿ ಸನ್ ಆಫ್ ಜಯರಾಜ್” ಚಿತ್ರದ “ಕ್ಷಮಿಸು ತಾಯೇ” ಹಾಡು

ಟ್ರೆಂಡಿಂಗ್ ಆಗ್ತಿದೆ “ಜಾಂಟಿ ಸನ್ ಆಫ್ ಜಯರಾಜ್" ಚಿತ್ರದ “ಕ್ಷಮಿಸು ತಾಯೇ"...

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ”

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ” ತುಳು...

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್”

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್" ಶರತ್ ರಾಯ್ಸದ್ ನಿರ್ದೇಶನದಲ್ಲಿ ಮೂಡಿಬಂದಿದೆ ಅದ್ಭುತ ಕಿರುಚಿತ್ರ ನೋಡುಗರನ್ನು...