- ಶೀಘ್ರದಲ್ಲೇ ಟಿವಿಯಲ್ಲಿ ಬರಲಿದೆ ಧೃವ ಸರ್ಜಾ ಅಭಿನಯದ ಮಾರ್ಟಿನ್…
- ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಲೇಟೆಸ್ಟ್ ಮೂವಿ ‘ಮಾರ್ಟಿನ್’ ಈಗ ಮನೆಯಲ್ಲೇ ಕುಳಿತು ನೋಡಿ ಆನಂದಿಸಬಹುದಾಗಿದೆ. ಹೆಚ್ಚಿನ ಡಿಟೈಲ್ಸ್ ಇಲ್ಲದೆ ನೋಡಿ..
ಅಕ್ಟೋಬರ್ 11, 2024 ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಎ.ಪಿ.ಅರ್ಜುನ್ ಅವರ ನಿರ್ದೇಶನ ಇರುವ, ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ Action prince Dhruva Sarja ಅವರ 6ನೇ ಸಿನಿಮಾ ‘ಮಾರ್ಟಿನ್’ Martin movie ಸದ್ಯದಲ್ಲೇ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ತಾರಾಗಣದಲ್ಲಿ ಇವರೆಲ್ಲಾ ಇದ್ದಾರೆ
ನಾಯಕ ನಟಿಯಾಗಿ ವೈಭವಿ ಶಾಂಡಿಲ್ಯ ಮಿಂಚಿದ್ದಾರೆ. ಉಳಿದಂತೆ ಚಿಕ್ಕಣ್ಣ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಗಿರಿಜಾ ಲೋಕೇಶ್, ಅನ್ವೇಷಿ ಜೈನ್, ನವಾಬ್ ಶಾ, ರೋಹಿತ್ ಪಠಾಕ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಟಿವಿಯಲ್ಲಿ ಪ್ರಸಾರವಾಗುವ ಸಮಯ ಮತ್ತು ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ ಈ ವರ್ಷದ ಕೊನೆಯೊಳಗೆ ಕ್ರಿಸ್ ಮಸ್ ಸಮಯಕ್ಕೆ ಮನೆಯಲ್ಲೇ ಕೂತು ಯಾವುದೇ ಖರ್ಚಿಲ್ಲದೇ ಮಾರ್ಟಿನ್ ಫಿಲ್ಮ್ ನೋಡಿ ಎಂಜಾಯ್ ಮಾಡಬಹುದಾಗಿದೆ.