ಇತ್ತೀಚೆಗಷ್ಟೇ ಟಾಲಿವುಡ್ ನ ಜೈ ಹನುಮಾನ್ ( Jai Hanuman )ಚಿತ್ರಕ್ಕೆ ಸಹಿ ಹಾಕಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ( Rishab Shetty ) ಇದೀಗ ಬಾಲಿವುಡ್ ಮೂವಿಯೊಂದರ ಪೋಸ್ಟರ್ ರಿಲೀಸ್ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.
ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಸಂದೀಪ್ ( Sandeep ) ಅವ್ರ ಮಹತ್ವಾಕಾಂಕ್ಷಿ ಸಿನೆಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಆಗಿ ಮಿಂಚಲಿದ್ದಾರೆ ರಿಷಭ್. ಈ ಐತಿಹಾಸಿಕ ಸಿನೆಮಾದ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹೊರಬಂದಿದ್ದು ಖಡ್ಗ ಹಿಡಿದ ಶಿವಾಜಿ ಮಹರಾಜರ ಲುಕ್ ನಲ್ಲಿ ರಿಷಭ್ ಕಾಣಿಸಿಕೊಂಡಿದ್ದಾರೆ. ಇದು ಸಿನಿಪ್ರಿಯರೆಲ್ಲರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಇದೊಂದು ಬಯೋಪಿಕ್ ಚಲನಚಿತ್ರವಾಗಿದ್ದು, 2027 ರ ಜನವರಿ 21 ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಾವರ್ಕರ್, ಮೇರಿ ಕೋಮ್, ಬಾಜಿರಾವ್ ಮಸ್ತಾನಿ, ಸರಬ್ಜಿತ್, ರಾಮ್ಲೀಲಾ ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಡೈರೆಕ್ಟ್ರ್ ಸಂದೀಪ್ ಹಾಗೂ ರಿಷಭ್ ಜೋಡಿಯ ಚಿತ್ರ ಹೇಗಿರಬಹುದೆಂಬ ಊಹೆ ಮಾಡಲು ಕಷ್ಟವಿದ್ದು, ಉತ್ತರ ಸಿಗಲು ಇನ್ನೂ ಮೂರು ವರ್ಷ ಕಾಯಬೇಕಿದೆ.