OTT Released Kannada new movies list:
ನಾಳೆ ರಜಾ ಕೋಳಿ ಮಜಾ Nale Rajaa Koli Majaa
ಅಭಿಲಾಷ್ ಶೆಟ್ಟಿ ಆಕ್ಷನ್ ಕಟ್ ಹೇಳಿರೋ ಈ ಕನ್ನಡ ಸಿನಿಮಾ. ಒಂದು ರಜೆಯ ದಿನ ಮೊಮ್ಮಗಳಿಗಾಗಿ ಕೋಳಿ ಸಾರು ಮಾಡಲು ಹೊರಡುವ ಅಜ್ಜ, ಅಜ್ಜಿಯ ಕಥೆಯೇ ಚಿತ್ರದ ಕಥಾಹಂದರ. ಮೇ 9 ರಂದು ತೆರೆಗೆ ಬಂದಿದ್ದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ನಲ್ಲಿ ಲಭ್ಯವಿದೆ.
ಇಲೆವೆನ್ Eleven
ಲೋಕೇಶ್ ಅಜಿಸ್ ಆಕ್ಷನ್ ಕಟ್ ಹೇಳಿರುವ ನವೀನ್ ಚಂದ್ರ, ಅಭಿರಾಮಿ ನಾಯಕತ್ವದಲ್ಲಿ ಮೂಡಿಬಂದಿದೆ ಚಿತ್ರ. ಇದೊಂದು ಆಕ್ಷನ್, ಥ್ರಿಲ್ಲರ್ ಮೂವೀ. ಮೇ 16 ಕ್ಕೆ ತೆರೆಗೆ ಬಂದಿದ್ದ ಈ ಚಿತ್ರ ಇದೀಗ ಕನ್ನಡ ಭಾಷೆಯಲ್ಲಿ ಅಮೆಜಾನ್ ಪ್ರೈಂ ನಲ್ಲಿ ಲಭ್ಯವಿದೆ.
ಶುಭಂ Shubham
ಲೈಟ್ ಹಾರರ್, ಕಾಮಿಡಿ ಜಾನರ್ ನ ಈ ಮೂವೀ ಜಿಯೋ ಹಾಟ್ ಸ್ಟಾರ್ ನಲ್ಲಿ ಕನ್ನಡ ಭಾಷೆಯಲ್ಲಿ ಲಭ್ಯವಿದ್ದು, ಸಮಂತಾ ಅವ್ರು ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೇಸರಿ ಚಾಪ್ಟರ್ 2 Kesari Chapter 2
ಕರಣ್ ಸಿಂಗ್ ತ್ಯಾಗಿ ನಿರ್ದೇಶನದ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಅಕ್ಷಯ್ ಕುಮಾರ್, ಆರ್. ಮಾಧವನ್, ಅನನ್ಯಾ ಪಾಂಡೆ ಮುಂತಾದವರು. ಇದೀಗ ಜಿಯೋ ಹಾಟ್ ಸ್ಟಾರ್ ನಲ್ಲಿ ಹಿಂದಿ ಭಾಷೆಯಲ್ಲಿ ಲಭ್ಯವಿದೆ ಈ ಸಿನಿಮಾ.
ಏಸ್ Ace
ಆರ್ಮುಗ ಕುಮಾರ್ ಡೈರೆಕ್ಷನ್ ನೊಂದಿಗೆ ವಿಜಯ್ ಸೇತುಪತಿ, ರುಕ್ಮಿಣಿ ವಸಂತ್, ಅವಿನಾಶ್ ಬಿ.ಎಸ್. ಲೀಡ್ ರೋಲ್ ನಲ್ಲಿದ್ದಾರೆ. ಬಹಳ ಕೆಟ್ಟ ಸ್ಥಿತಿಯಲ್ಲಿ ಮಲೇಷ್ಯಾದಲ್ಲಿ ಕೆಲಸ ಹುಡುಕಲು ಹೋದ ನಾಯಕನ ಕಥೆಯೇ ಈ ಚಿತ್ರದ ಜೀವಾಳ. ಮೇ 23 ಕ್ಕೆ ರಿಲೀಸ್ ಆಗಿದ್ದು ಫಿಲ್ಮ್ ಇದೀಗ ಈ ಫಿಲ್ಮ್ ಅಮೆಜಾನ್ ಪ್ರೈಂನಲ್ಲಿ ಕನ್ನಡ ಭಾಷೆಯಲ್ಲಿ ಲಭ್ಯವಿದೆ.