- ಡಾ. ರಾಜಕುಮಾರ್ ನಟಿಸಿದ್ದಈ ಸಿನಿಮಾ ಕಥೆಗೆ ಈಗ ಪ್ಯಾನ್ ಇಂಡಿಯಾ ಲುಕ್ ನೀಡಲು ಹೊರಟ್ರು ಖ್ಯಾತ ಬಾಲಿವುಡ್ ನಿರ್ದೇಶಕ
- ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ಕೀರ್ತಿ ಪಡೆದಿತ್ತು “ಶ್ರೀಕೃಷ್ಣ ದೇವರಾಯ” ಚಿತ್ರ.
- ಪ್ಯಾನ್ ಇಂಡಿಯಾ ಸ್ಪರ್ಶ ಕೊಡಲು ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಪ್ರಯತ್ನ ನಡೆಸಿದ್ದಾರೆ.
ಅಂದು ಡಾ. ರಾಜುಮಾರ್ Raj Kumar ಅವರು ನಟಿಸಿದ್ದ, ವಿಜಯನಗರ ಸಾಮ್ರಾಜ್ಯದ ರಾಜನ ಕತೆ ಆಧಾರಿತ “ಶ್ರೀಕೃಷ್ಣ ದೇವರಾಯ” Sri Krishna Devaraya ಚಿತ್ರ, ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ಕೀರ್ತಿ ಪಡೆದಿತ್ತು. ಶ್ರೀ ಕೃಷ್ಣ ದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಣ್ಣಾವ್ರು, ಜನಮನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ರು.
ಕೃಷ್ಣ ದೇವರಾಯನ ಪಾತ್ರದಲ್ಲಿ ರಿಷಬ್ ಶೆಟ್ಟಿ?
ಇದೀಗ ಅದೇ ಕೃಷ್ಣದೇವರಾಯನ ಚಿತ್ರಕಥೆಗೆ ಪ್ಯಾನ್ ಇಂಡಿಯಾ ಸ್ಪರ್ಶ ಕೊಡಲು ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ Ashuthosh Devarikar ಪ್ರಯತ್ನ ನಡೆಸಿದ್ದಾರೆ. ಅಷ್ಟು ಮಾತ್ರವಲ್ಲ, ಈ ಚಿತ್ರಕ್ಕೆ ಕೃಷ್ಣ ದೇವರಾಯನ ಪಾತ್ರದಲ್ಲಿ ರಿಷಬ್ ಶೆಟ್ಟಿ Rishbh Shetty ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಚಿತ್ರದ ಕಥೆ, ಹಳೆಯ “ಶ್ರೀಕೃಷ್ಣ ದೇವರಾಯ” ಸಿನಿಮಾನ್ನು ಆಧರಿಸಿದ್ದಾದರೂ, ಅದೇ ಕತೆಗೆ ಇನ್ನಷ್ಟು ಅಂಶಗಳು ಸೇರಿಕೊಂಡು ಹೊಸತಾದ ನಿರೂಪಣೆಯೊಂದಿಗೆ ಈ ಸಿನಿಮಾ ಮೂಡಿಬರಲಿದೆಯಂತೆ.
ಐತಿಹಾಸಿಕ ಸಿನಿಮಾಗಳನ್ನು ನಿರ್ಮಿಸುವಲ್ಲಿ ಸಿದ್ಧ ಹಸ್ತರು ಅಶುತೋಷ್
“ಜೋಧಾ ಅಕ್ಬರ್” Jodha Akbar, “ಲಗಾನ್” Laggan, “ಸ್ವದೇಶ್” Swadesh ಮುಂತಾದ ಒಳ್ಳೊಳ್ಳೆ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಅಶುತೋಷ್ ಗೋವಾರಿಕರ್ ಐತಿಹಾಸಿಕ ಸಿನಿಮಾಗಳನ್ನು ನಿರ್ಮಿಸುವಲ್ಲಿ ಸಿದ್ಧ ಹಸ್ತರು. ಇದೀಗ ಕನ್ನಡದ ನಟ ರಿಷಬ್ ಶೆಟ್ಟಿ ಅವರನ್ನು ”ಕೃಷ್ಣದೇವರಾಯ”ನನ್ನಾಗಿ ಮಾಡುವ ಸಾಹಸಕ್ಕೆ ಅವರು ಕೈಹಾಕಿದ್ದಾರೆ. ಸದ್ಯ ಸಿನಿಮಾದ ಕುರಿತು ಇನ್ನೂ ಅಧಿಕೃತ ಘೋಷಣೆಯಾಗಿಲ್ಲವಾದರೂ ರಿಷಬ್ ಶೆಟ್ಟಿ ನಟಿಸುವುದು ಬಹುತೇಕ ಖಚಿತವೆನ್ನಲಾಗಿದೆ. ಕಾಂತಾರ ಚಾಪ್ಟರ್ 1 ನ ನಿರೀಕ್ಷೆಯಲ್ಲಿರುವ ರಿಷಬ್ ಅಭಿಮಾನಿಗಳಿಗಂತೂ ಇದೊಂದು ಗೂಡ್ ನ್ಯೂಸೇ ಸರಿ. ಸಿನಿಮಾ ಯಾವಾಗ ಬರಲಿದೆ? ಬೇರೆ ಯಾರ್ಯಾರು ಅಭಿನಯಿಸುತ್ತಾರೆ? ಎನ್ನುವ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಏನೇ ಆಗಲಿ “ಶ್ರೀ ಕೃಷ್ಣ ದೇವರಾಯ” ಚಿತ್ರ ಅದ್ದೂರಿಯಾಗಿ ಮೂಡಿಬರುವುದಂತೂ ಹೌದು.