- ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಕುರಿತಾದ ಕೆಲವು ಅನ್ ಟೋಲ್ಡ್ ಸ್ಟೋರೀಸ್ ಇಲ್ಲಿದೆ…
- ತಮಿಳುನಾಡಿನ ಮುಖ್ಯಮಂತ್ರಿಗಳೇ ರಾಜ್ ಕುಮಾರ್ ಬಳಿ ಬಂದು ಕೈಗೆ ಮುತ್ತಿಟ್ಟು ಕ್ಷಮೆ ಕೇಳುವ ಸಂದರ್ಭ ಬಂದಿತ್ತು!
- ವೀರಪ್ಪನ್ ನಿಂದ ಬಂಧನಕ್ಕೊಳಗಾಗಿದ್ದ ಡಾ. ರಾಜ್ ಅವ್ರು ವನವಾಸದದಿಂದ ನಾಡಿಗೆ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಇದು
1970-80 ರ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ Dr. Raj Kumar ಅವ್ರ ಒಂದು ಫಿಲ್ಮ್ ಶೂಟಿಂಗ್ ಆಗ್ತಾ ಇದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತಮಿಳರು ರಾಜ್ ಕುಮಾರ್ ಅವ್ರ ಮೇಲೆ ಚಪ್ಪಲಿಯನ್ನು ಎಸೆದಿದ್ರಂತೆ. ಆದ್ರೆ ರಾಜ್ ಕುಮಾರ್ ಅವ್ರು ತಮ್ಮ ದೊಡ್ಡ ಗುಣದಿಂದ ಈ ಬಗ್ಗೆ ಹೆಚ್ಚು ಸುದ್ದಿಯನ್ನು ಮಾಡಕ್ಕೆ ಹೋಗಿರ್ಲಿಲ್ಲಂತೆ. ಈ ವಿಷ್ಯ ಹೇಗೋ ಅಭಿಮಾನಿಗಳಿಗೆ ತಿಳಿದು ಚಪ್ಪಲಿ ಎಸೆದವರನ್ನು ಹೆಡೆಮುರಿಕಟ್ತೀವಿ ಅಂತ ಅಭಿಮಾನಿಗಳು ಪಣ ತೊಡ್ತಾರೆ. ಇದನ್ನು ತಿಳಿದುಕೊಂಡ ಅಂದಿನ ತಮಿಳುನಾಡಿನ ಮುಖ್ಯ ಮಂತ್ರಿಗಳಾಗಿದ್ದ ಎಂ.ಜಿ.ಆರ್. ಚೆನೈನಿಂದ ಕೂಡ್ಲೇ ಬೆಂಗಳೂರಿಗೆ ರಾಜ್ ಕುಮಾರ್ ಅವ್ರ ಮನೆಗೆ ಹೋಗಿ ಅಣ್ಣಾವ್ರ ಕೈಗೆ ಮುತ್ತಿಟ್ಟು, ತಮಿಳರು, ಕನ್ನಡಿಗರು ಸಹೋದರರು. ನಾನು ತಮಿಳರ ಪರವಾಗಿ ನಿಮ್ಮ ಕ್ಷಮೆ ಕೇಳ್ತೀನಿ ಅಂತ ಹೇಳಿದ್ರಂತೆ. ಇದು ರಾಜ್ ಕುಮಾರ್ ಅವ್ರ ದೊಡ್ಡಗುಣ.
ಮಕ್ಕಳ ಪ್ರೀತಿಯ ರಾಜ “ಡಾ. ರಾಜ್ ಕುಮಾರ್”
ಡಾ. ರಾಜ್ ಅವ್ರ ಫುಲ್ ಫ್ಯಾಮಿಲಿ ಚೆನ್ನೈನಲ್ಲಿದ್ದಾಗ ಅವ್ರದ್ದು ಕೂಡುಕುಟುಂಬ ಆಗಿತ್ತಂತೆ. ಅಲ್ಲಿ ಒಟ್ಟು 28 ಮಕ್ಕಳಿದ್ರಂತೆ. ರಾಜ್ ಕುಮಾರ್ ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ತಮ್ಮ ಸಾಯಂಕಾಲಗಳನ್ನು ಆ ಮಕ್ಕಳೊಟ್ಟಿಗೆ ಕಳೀತಿದ್ರಂತೆ. ಎಲ್ಲಾ ಮಕ್ಕಳೂ ಸಂಜೆ ಒಟ್ಟಿಗೆ ಕೂತ್ಕೊಂಡು ಶಿಸ್ತಾಗಿ ಹಿರಿಯರು ಹಾಕಿದ ನ್ಯೂಸ್ ಅಥವಾ ಹಾಡುಗಳನ್ನು ಟಿ.ವಿ.ಲಿ ನೋಡ್ಬೇಕಿತ್ತಂತೆ. ಅಣ್ಣಾವ್ರೂ ಮಕ್ಕಳ ಜೊತೆ ಕೂತ್ಕೊಂಡು ಟಿ.ವಿ. ನೋಡ್ತಾ ಮಕ್ಕಳನ್ನೆಲ್ಲಾ ಮಾತಾಡಿಸ್ತಾ ಅವರ ಓದು ಬರಹಗಳ ಬಗ್ಗೆ ವಿಚಾರಿಸ್ತಿದ್ರಂತೆ. ರಾತ್ರಿ ಊಟಕ್ಕೆ ಕೆಲವೊಮ್ಮೆ ಎಲ್ಲರೂ ಸೇರಿ ಹೋಟೆಲ್ ಗೆ ಹೋಗ್ತಿದ್ರಂತೆ. ಪಾರ್ಕ್ ಗೆ ಮಕ್ಕಳನ್ನೆಲ್ಲಾ ಕರೆದುಕೊಂಡು ಹೋದ್ರೆ ಮಕ್ಕಳು ಆಡೋದನ್ನ ಮುಗ್ಧತೆಯಿಂದ ನೋಡ್ತಿದ್ರಂತೆ ಡಾ. ರಾಜ್.
108 ದಿನಗಳ ವನವಾಸ
ವೀರಪ್ಪನ್ ಅವ್ರು ರಾಜ್ ಕುಮಾರ್ ಅವರನ್ನ ಕಿಡ್ನಾಪ್ ಮಾಡಿದ್ದ ಸಂದರ್ಭದಲ್ಲಿ ರಾಜ್ಯದ ಜನತೆಯ ಜೊತೆಗೆ ರಾಜ್ ಫ್ಯಾಮಿಲಿಯಲ್ಲಿ ಎಲ್ಲರಿಗೂ ಆತಂಕ ಶುರುವಾಗಿತ್ತು. ವೀರಪ್ಪನ್ ಖಂಡಿತವಾಗಿ ಏನಾದ್ರೂ ಮಾಡೇ ಮಾಡ್ತಾನೆ ಅನ್ನೋ ಎಲ್ಲಾ ಕೆಟ್ಟ ಯೋಚನೆಗಳು ಕುಟುಂಬದವರ ನಿದ್ದೆ ಕೆಡಿಸಿದ್ವು. ಈ ಟೈಮ್ ನಲ್ಲಿ ಪುನೀತ್ ರಾಜ್ ಕುಮಾರ್ ಯಾವಾಗ್ಲೂ ಅಮ್ಮನ ಜೊತೆಗಿದ್ದು ಧೈರ್ಯ ತುಂಬ್ತಿದ್ರಂತೆ. ಶಿವರಾಜ್ ಕುಮಾರ್ ಹೊರಗಿನ ಚಟುವಟಿಕೆಗಳ ಕಡೆಗೆ ಗಮನ ಹರಿಸ್ತಿದ್ರಂತೆ. ಎಲ್ಲಾ ಪಕ್ಷದವರೂ ಈ ಒಂದು ವಿಚಾರದಲ್ಲಿಒಂದಾಗಿ ನಿಂತು ರಾಜ್ ಕುಮಾರ್ ಅವ್ರನ್ನ ವೀರಪ್ಪನ್ ಬಂಧನದಿಂದ ಯಶಸ್ವಿಯಾಗಿ ಬಿಡಿಸಿಕೊಂಡು ಬಂದ್ರಂತೆ. 108 ದಿನಗಳ ವನವಾಸದ ನಂತರ ನಾಡಿಗೆ ಬರುತ್ತಿದ್ದಂತೆ ರಾಜ್ ಕುಮಾರ್ ಮಾತೃಭೂಮಿಗೆ ನಮಸ್ಕರಿಸಿ ಭಾವುಕರಾದರು.


