- ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುವ ದಾರಿಯಲ್ಲಿ ಸಾಗ್ತಿದೆ “ಎಕ್ಕ”
- ರಿಲೀಸ್ ಆಗುವ ಮೊದಲೇ ಹಾಡುಗಳ ಮೂಲಕ ಸಖತ್ ಹಿಟ್ ಆಗಿದ್ದ “ಎಕ್ಕ” ಸಿನಿಮಾ
- ಒಂದು ವರದಿಯ ಪ್ರಕಾರ ಮೊದಲ ದಿನವೇ 1.60 ಕೋಟಿ – 2 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ
ರಿಲೀಸ್ ಆಗುವ ಮೊದಲೇ ಹಾಡುಗಳ ಮೂಲಕ ಸಖತ್ ಹಿಟ್ ಆಗಿದ್ದ “ಎಕ್ಕ” Ekka ಸಿನಿಮಾ, ಇದೀಗ ರಿಲೀಸ್ ಆದ ಮೊದಲ ದಿನನೇ ಭರ್ಜರಿ ಗಳಿಕೆ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಹೌದು, ಶುಕ್ರವಾರಷ್ಟೇ ರಿಲೀಸ್ ಆಗಿದ್ದ ಯುವ ರಾಜ್ಕುಮಾರ್ Yuva Raj Kumar ಅಭಿನಯದ “ಎಕ್ಕ” ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಕೆಲವೊಂದು ತಿಂಗಳುಗಳಿಂದ ಕನ್ನಡದ ಯಾವ ಸಿನಿಮಾ ಕೂಡ ಥಿಯೇಟರ್ ನಲ್ಲಿ ಒಳ್ಳೆಯ ಗಳಿಕೆಯ ಮೂಲಕ ಸದ್ದು ಮಾಡಿರಲಿಲ್ಲ. ಆದರೆ “ಎಕ್ಕ” ಚಿತ್ರಈ ವರ್ಷದಲ್ಲಿ ಸುಮಾರು 5 ಕೋಟಿ ಗಳಿಕೆ ಮಾಡಿದ ಶರಣ್ ನಟನೆಯ “ಛೂ ಮಂತರ್” ಚಿತ್ರವನ್ನೂ ಗಳಿಕೆಯಲ್ಲಿ ಹಿಂದಿಕ್ಕಿ ಮುನ್ನುಗ್ಗುವ ಸಾಧ್ಯತೆ ಇದೆ. ಮಾಸ್ ಮನರಂಜನೆ ಚಿತ್ರ ಇದಾಗಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ಸಖತ್ ಹಿಟ್ ಆಗಿದೆ. ಹಾಗಾಗಿ ಸಿನಿಮಾ ತಂಡ ಗೆಲುವಿನ ನಗೆ ಬೀರಿದೆ.
ಯುವ ನಟರ ಚಿತ್ರಗಳು ಕೂಡ ಹಿಟ್ ಆಗುತ್ತೆ
ಒಂದು ವರದಿಯ ಪ್ರಕಾರ “ಎಕ್ಕ” ಸಿನಿಮಾ ಮೊದಲ ದಿನವೇ 1.60 ಕೋಟಿ ರೂಪಾಯಿಯಿಂದ 2 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಮೊದಲೇ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿತ್ತು “ಎಕ್ಕ” ಚಿತ್ರ. ಇದೀಗ ಥಿಯೇಟರ್ ನತ್ತಲೂ ಜನ ಬರುವಂತೆ ಮಾಡುತ್ತಿದೆ, ಆ ಮೂಲಕ ಸ್ಟಾರ್ ನಟರ ಚಿತ್ರಗಳು ಮಾತ್ರ ಹಿಟ್ ಆಗೋದಲ್ಲ, ಹೊಸ ಯುವ ನಟರ ಚಿತ್ರಗಳು ಕೂಡ ಹಿಟ್ ಆಗುತ್ತೆ ಎನ್ನುವುದನ್ನು ಪ್ರೇಕ್ಷಕರು ಸಾಬೀತು ಮಾಡಿದ್ದಾರೆ.
ಎಕ್ಕ ಸಿನಿಮಾವನ್ನು ರೋಹಿತ್ ಪದಕಿ Rohith Padaki ಅವರು ನಿರ್ದೇಶನ ಮಾಡಿದ್ದಾರೆ. ಹಳ್ಳಿಯಿಂದ ಸಿಟಿಗೆ ಬರೋ ಹುಡುಗನ ಕಥೆ ಇರುವ ಸಿನಿಮಾ ಇದು. ಸಂಜನಾ ಆನಂದ್ Sanjana Anand, ಸಂಪದ Sampada ಯುವ ರಾಜಕುಮಾರ್ ಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ Ashwini Puneeth Raj Kumar, ಕಾರ್ತಿಕ್ ಗೌಡ, ಯೋಗಿ, ಜಯಣ್ಣ ಹಾಗೂ ಭೋಗೇಂದ್ರ ಅವರು ಚಿತ್ರ ನಿರ್ಮಾಣ ಮಾಡಿದ್ದು ಇನ್ನೂ ಒಂದಷ್ಟು ವಾರಗಳ ಕಾಲ “ಎಕ್ಕ” ಯಶಸ್ವಿಯಾಗಿ ಮುನ್ನುಗ್ಗುವ ನಿರೀಕ್ಷೆ ಚಿತ್ರ ತಂಡಕ್ಕಿದೆ.