- ಸಂಚಲನ ಮೂಡಿಸ್ತಿದೆ “ಎಕ್ಕ” ಸಿನಿಮಾದ ಈ “ರೌಡಿ ರೈಮ್ಸ್”
- ಈ ಹಾಡನ್ನು ರೌಡಿಸಂ ಜಗತ್ತಿನ ಸುತ್ತ ಹೆಣೆಯಲಾಗಿದೆ.
- A ನಿಂದ Z ವರೆಗಿನ ವರ್ಣಮಾಲೆಯ ಮೂಲಕ ಕಥೆ ಹೇಳುತ್ತಾ ಸಾಗುವುದು ವಿಶೇಷ.
“ಬ್ಯಾಂಗಲ್ ಬಂಗಾರಿ” Bangle Bangari ಹಾಡಿನ ಮೂಲಕ ಸಖತ್ತಾಗಿ ಸದ್ದು ಮಾಡ್ತಿರೋ “ಎಕ್ಕ” Ekka ಚಿತ್ರತಂಡ, ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದ್ದು ಆ ಹಾಡೂ ಕೂಡ ಯುಟ್ಯೂಬ್ ನಲ್ಲಿ ಅಬ್ಬರಿಸ್ತಾ ಇದೆ. ಈ ಹಾಡನ್ನು ರೌಡಿಸಂ ಜಗತ್ತಿನ ಸುತ್ತ ಹೆಣೆಯಲಾಗಿದೆ. ಅಂದರೆ ಹಾಡಲ್ಲಿ ರೌಡಿಸಂ ಸಂಸ್ಕೃತಿಯನ್ನು ಆಕರ್ಷಕ ರೀತಿನಲ್ಲಿ ಕಟ್ಟಿಕೊಡಲಾಗಿದೆ. ಜೊತೆಗಳ ರೌಡಿಗಳ ಜೀವನದ ವಿವಿಧ ಆಯಾಮಗಳನ್ನು ಈ ಹಾಡು ಬಿಚ್ಚಿಡುತ್ತದೆ. ಸಿನಿಮಾದ ಕುರಿತು ಕುತೂಹಲ ಕೂಡ ಮೂಡಿಸುತ್ತದೆ ಈ ಹಾಡು. ಹಾಗಾಗಿ ಇದನ್ನು “ರೌಡಿ ರೈಮ್ಸ್” Rowdi Rhyms ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಾಡು A ನಿಂದ Z ವರೆಗಿನ ವರ್ಣಮಾಲೆಯ ಮೂಲಕ ಕಥೆ ಹೇಳುತ್ತಾ ಸಾಗುವುದು ವಿಶೇಷ.
ಹಾಡಿನ ಹಿಂದೆ ಇವರ ಕೈಚಳಕವಿದೆ
ಚಿತ್ರರಂಗಕ್ಕೆ ಟ್ರೆಂಡ್ ಸೆಟ್ಟಿಂಗ್ ಹಾಡುಗಳನ್ನು ನೀಡುತ್ತಿರುವ ಸಂಗೀತ ನಿರ್ದೇಶಕ ಚರಣ್ ರಾಜ್ Charan Raj ಈ ರೌಡಿ ಹಾಡನ್ನು ಹುಟ್ಟಿಸಿದ್ದಾರೆ. ಹಾಡಿಗೆ ನಾಗಾರ್ಜುನ್ ಶರ್ಮಾ Nagarjuna Sharma ಮತ್ತು ಚಿತ್ರದ ನಿರ್ದೇಶಕ ರೋಹಿತ್ ಪದಕಿ Rohith Padaki ಅವರ ಸಾಹಿತ್ಯವಿದೆ. ಅಲ್ಲದೆ ಈ ಹಾಡಿಗೆ ಚರಣ್ ರಾಜ್ ಮತ್ತು ರೋಹಿತ್ ಪದಕಿ ಅವರು ವಿಭಿನ್ನ ಶೈಲಿಯ ಧ್ವನಿ ನೀಡಿ ಹಾಡಿರುವುದು ಬೇರೆಯದ್ದೇ ಆದ ಫೀಲ್ ಕೊಟ್ಟಿದೆ. ಯುವ ರಾಜ್ ಕುಮಾರ್ Yuva Rajkumar ನಟನೆಯ ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನವಿದ್ದು , ಅಶ್ವಿನಿ ಪುನೀತ್ ರಾಜ್‌ಕುಮಾರ್ Ashwini Punith Raj Kumar ಅವರ ಪಿಆರ್‌ಕೆ ಪ್ರೊಡಕ್ಷನ್ಸ್, PRK Productions ಜಯಣ್ಣ ಮತ್ತು ಬೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ Jayanna Films ಮತ್ತು ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್ KRG Studios ಜಂಟಿಯಾಗಿ ನಿರ್ಮಿಸಿವೆ. ಸಿನಿಮಾ ರಿಲೀಸ್ ಗೂ ಮೊದಲೇ “ಎಕ್ಕ”ದ ಹಾಡುಗಳು ಸಂಚಲನ ಮೂಡಿಸುತ್ತಿದ್ದು ಪ್ರೇಕ್ಷಕರು ಥ್ರಿಲ್ಲಾಗಿರೋದಂತೂ ನಿಜ.