ಏಳುಮಲೆ” ಚಿತ್ರಕ್ಕೆ ಉಘೇ ಉಘೇ ಎಂದರು ಪ್ರೇಕ್ಷಕರು

Date:

  • ಏಳುಮಲೆ” ಚಿತ್ರಕ್ಕೆ ಉಘೇ ಉಘೇ ಎಂದರು ಪ್ರೇಕ್ಷಕರು
  • ಡಿಫರೆಂಟ್ ನಿರೂಪಣೆಯ ಚಿತ್ರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ರೆಸ್ಪಾನ್ಸ್
  • ಸದ್ದು ಮಾಡ್ತಿದೆ ಪರಿಶುದ್ಧ ಪ್ರೇಮ ಕತೆ

ಸ್ಯಾಂಡಲ್ವುಡ್ನ (Sandalwood) ಏಳುಮಲೆ ಚಿತ್ರಕ್ಕೆ (Elumale Movie) ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಚಿತ್ರದ ಬಗ್ಗೆ ಪೊಸಿಟಿವ್ ರೆಸ್ಪಾನ್ಸ್ ಗಳು ಜಾಸ್ತಿಯಾಗಿದ್ದು ಮಸ್ಟ್ ವಾಚ್ ಸಿನಿಮಾ ಅನ್ನೋ ಅಭಿಪ್ರಾಯಗಳು ಕೇಳಿ ಬರ್ತಿದೆ.


“ಏಳುಮಲೆ” ಚಿತ್ರದ ಪರಿಶುದ್ಧ ಪ್ರೀತಿ, ಭಾವನೆ ಮತ್ತು ಥ್ರಿಲ್ಲರ್ ಕತೆಯನ್ನು ಕನ್ನಡದ ಸಿನಿ ರಸಿಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಚಿತ್ರದ ಕೊನೆಕೊನೆಯ 15 ನಿಮಿಷದ ದೃಶ್ಯಗಳಿಗಂತೂ ಪ್ರೇಕ್ಷಕರು ಹುಬ್ಬೇರಿಸಿದ್ದಾರೆ. ರಾಣಾ (rana) ಮತ್ತು ಪ್ರಿಯಾಂಕಾ (Priyanka) ನಟನೆಗೆ ಪ್ರೇಕ್ಷಕರು ಜೈ ಹೋ ಎಂದಿದ್ದಾರೆ. ಪುನೀತ್ ರಂಗಸ್ವಾಮಿ (punith rangaswamy) ನಿರ್ದೇಶನದ ಈ ಸಿನಿಮಾಗೆ ತರುಣ್ ಸುಧೀರ್(Tarun sudheer) ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಅವರ ನಿರ್ಮಾಣದಲ್ಲಿ ‘ಏಳುಮಲೆ’ ಸಿನಿಮಾ ಮೂಡಿಬಂದಿದೆ.


ತಮಿಳು-ಕನ್ನಡದ ಭಾಷಾ ಸೊಗಡು ಹೇಳುವ ಕತೆ:


ಡ್ರೈವರ್ ಪಾತ್ರದಲ್ಲಿ ನಟಿಸಿದ ರಾಣಾ ನಟನೆ ತುಂಬಾ ಮಂದಿಗೆ ಇಷ್ಟವಾಗಿದೆ. ಕಾಲೇಜು ಹುಡುಗಿಯಾಗಿ ಪ್ರಿಯಾಂಕಾ ಆಚಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತಮಿಳುನಾಡಿನ ಹುಡುಗಿಗೆ, ಕರ್ನಾಟಕದ ಹುಡುಗನ ಮೇಲೆ ಲವ್ ಆಗುವ ಕಥೆ ಈ ಚಿತ್ರದಲ್ಲಿದೆ. ಪ್ರೀತಿಗಾಗಿ ಮನೆ ಬಿಟ್ಟು ಬರುವ ಹುಡುಗಿಯ ಜೀವನದಲ್ಲಿ ಒಂದು ರಾತ್ರಿಯೊಳಗೆ ಹತ್ತಾರು ಘಟನೆಗಳು ನಡೆಯುತ್ತವೆ. ಅದೇ ರಾತ್ರಿ ಹುಡುಗನ ಬಾಳಿನಲ್ಲಿ ಸಾವು-ಬದುಕಿನ ಸನ್ನಿವೇಶಗಳು ಎದುರಾಗುತ್ತವೆ. ಅದಕ್ಕೆಲ್ಲ ಕಾರಣ ಏನು? ಕೊನೆಯದಾಗಿ ಆ ಪ್ರೇಮಿಗಳು ಒಂದಾಗುತ್ತಾರಾ? ಇಲ್ಲವಾ? ಎನ್ನುವುದನ್ನು ಚಿತ್ರ ಹೇಳುತ್ತದೆ.
ಥ್ರಿಲ್ಲಿಂಗ್ ಆಗಿ, ಅದ್ಬುತ ದೃಶ್ಯಗಳ ಹಿನ್ನೆಲೆಯಲ್ಲಿ ಕತೆ ಹೇಳುವ ‘ಏಳುಮಲೆ’ ಚಿತ್ರ ತನ್ನ ಡಿಫರೆಂಟ್ ನಿರೂಪಣೆಯಿಂದ ಸದ್ದು ಮಾಡ್ತಿದೆ. ಜೊತೆಗೆ ಲವ್ ಮತ್ತು ಸಸ್ಪೆನ್ಸ್ ಎರಡನ್ನೂ ಈ ಸಿನಿಮಾದಲ್ಲಿ ಚೆನ್ನಾಗಿ ಬ್ಯಾಲೆನ್ಸ್ ಮಾಡಿರುವುದು ಚಿತ್ರದ ಗೆಲುವಿಗೆ ಕಾರಣವಾಗಿದೆ. ಕಿಶೋರ್, ನಾಗಾಭರಣ, ಜಗಪತಿ ಬಾಬು ಅವರ ನಟನೆ ಸೃಜಲಶೀಲವಾಗಿ ಮೂಡಿಬಂದಿದ್ದು , ಡಿ. ಇಮ್ಮಾನ್ ಅವರ ಸಂಗೀತವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಅದ್ವೈತ್ ಗುರುಮೂರ್ತಿ ಅವರ ಕ್ಯಾಮೆರಾ ಕೆಲಸವನ್ನೂ ಪ್ರೇಕ್ಷಕ ಪ್ರಭು ಮೆಚ್ಚಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಗಪ್ಪಳಿಸಲು ರೆಡಿಯಾಯ್ತು ಸೈಕಾಲಜಿಕಲ್ ಸಸ್ಪೆನ್ಸ್ “ರೂಮ್ ಬಾಯ್”

ತೆರೆಗಪ್ಪಳಿಸಲು ರೆಡಿಯಾಯ್ತು ಸೈಕಾಲಜಿಕಲ್ ಸಸ್ಪೆನ್ಸ್ “ರೂಮ್ ಬಾಯ್” ಪ್ರತಿಭಾನ್ವಿತರ ಪ್ರಯೋಗಾತ್ಮಕ ಮೂವಿ ಸೆಪ್ಟೆಂಬರ್...

ಆಕ್ಷನ್ ಥ್ರಿಲ್ಲರ್ ಚಿತ್ರ “ಮದರಾಸಿ” ಸೆಪ್ಟೆಂಬರ್ 5 ಕ್ಕೆ ಅದ್ದೂರಿ ತೆರೆಗೆ

ಆಕ್ಷನ್ ಥ್ರಿಲ್ಲರ್ ಚಿತ್ರ “ಮದರಾಸಿ” ಸೆಪ್ಟೆಂಬರ್ 5 ಕ್ಕೆ ಅದ್ದೂರಿ ತೆರೆಗೆ ಬಹುಭಾಷೆಯಲ್ಲಿ...

ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್

ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್ ಕಾಮಿಡಿ -ಹಾರರ್-ಥ್ರಿಲ್ಲರ್ ಮೂವಿ “ಸೀಟ್...

“ನೆತ್ತೆರೆಕೆರೆ” ಕೊಟ್ಟ ವಿಭಿನ್ನ ಫೀಲ್ ಗೆ ತುಳು ಪ್ರೇಕ್ಷಕರು ಫಿದಾ

“ನೆತ್ತೆರೆಕೆರೆ” ಕೊಟ್ಟ ವಿಭಿನ್ನ ಫೀಲ್ ಗೆ ತುಳು ಪ್ರೇಕ್ಷಕರು ಫಿದಾ ಡಿಫರೆಂಟ್ ಕತೆಯ...