- “ಕಾದಿದ್ದು ಸಾಕು, ಬಿಗ್ ಬಾಸ್ ಈಸ್ ಬ್ಯಾಕ್” ಎಂದು ಅಪ್ಪಳಿಸಿದ ಪ್ರೋಮೋ: ಈ ಬಾರಿ ಕಿಚ್ಚು ಹೆಚ್ಚಂತೆ !
- ಕಲರ್ಸ್ ಕನ್ನಡ ವಾಹಿನಿ ಈ ಸೀಸನ್ನ ಮೊದಲ ಬಿಗ್ ಬಾಸ್ ಪ್ರೋಮೊ ಬಿಡುಗಡೆ ಮಾಡಿದೆ.
- ಬಿಗ್ಬಾಸ್ ಸೀಸನ್ 12 ನ್ನು ಸುದೀಪ್ ಅವರೇ ನಡೆಸಿಕೊಡುವುದು ಫಿಕ್ಸ್ ಆಗಿದೆ.
ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ Bigg Boss ಸೀಸನ್ ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಸಿದ್ದವಾಗಿದೆ. ಮಲಯಾಳಂನಲ್ಲಿ ಈಗಾಗಲೇ ಬಿಗ್ಬಾಸ್ ರಿಯಾಲಿಟಿ ಶೋ ಆರಂಭವಾಗಿದೆ. ಹಿಂದಿಯಲ್ಲಿ ಇದೇ ತಿಂಗಳ ಅಂತ್ಯಕ್ಕೆ ಆರಂಭ ಆಗಲಿದೆ. ತೆಲುಗಿನಲ್ಲೂ ಬಿಗ್ಬಾಸ್ ಶೋ ಪ್ರಾರಂಭವಾಗುವ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಕನ್ನಡದಲ್ಲಿಯೂ ಸಹ ಬಿಗ್ಬಾಸ್ ಹೊಸ ಸೀಸನ್ನ ಬಗ್ಗೆ ಹೊಸತೊಂದು ಅಪ್ಡೇಟ್ ಸಿಕ್ಕಿದೆ.
ಈ ಸಲ ಕಿಚ್ಚು ಮಾತ್ರ ಹೆಚ್ಚು
ಯಸ್, ಕಲರ್ಸ್ ಕನ್ನಡ ವಾಹಿನಿ ಈ ಸೀಸನ್ನ ಮೊದಲ ಬಿಗ್ ಬಾಸ್ ಪ್ರೋಮೊ ಬಿಡುಗಡೆ ಮಾಡಿದೆ. “ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್” ಎಂಬ ಸಾಲುಗಳೊಂದಿಗೆ ಈ ಹೊಸ ಬಿಗ್ಬಾಸ್ನ ಟೈಟಲ್ ಪ್ರೋಮೋ ಬಿಡುಗಡೆಯಾಗಿದೆ. ಪ್ರೊಮೋದಲ್ಲಿ ಬಿಗ್ಬಾಸ್ ಲೋಗೋ ಇದೆ. ಆದರೆ ಬಿಗ್ ಬಾಸ್ ನಡೆಸಿಕೊಡುವ ಸುದೀಪ್ ಕಾಣಿಸುತ್ತಿಲ್ಲ. ಆದರೆ “ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್” ಸಾಲುಗಳ ಜೊತೆಗೆ “ಈ ಸಲ ಕಿಚ್ಚು ಮಾತ್ರ ಹೆಚ್ಚು” ಎಂಬ ವಾಕ್ಯವೂ ಇದೆ. ಈ ಸಲ ಬಿಗ್ಬಾಸ್ ಸೀಸನ್ 12 ನ್ನು ಸುದೀಪ್ ಅವರೇ ನಡೆಸಿಕೊಡುವುದು ಫಿಕ್ಸ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಸುದೀಪ್ ಅವರು ಪ್ರೋಮೊ ಶೂಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಬಿಗ್ ಬಾಸ್ ಸ್ಪರ್ಧಿಗಳ ಮಾಹಿತಿ ಇಲ್ಲ
ಈಗ ಬಿಡುಗಡೆಗೊಂಡಿರುವ ಪ್ರೋಮೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇನ್ನೂ ಈ ಪ್ರೋಮೋ ವೈರಲ್ ಆಗುತ್ತಲೇ ಇದೆ. ಈ ಸಲದ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಅಧೀಕೃತ ಮಾಹಿತಿಯನ್ನೂ ವಾಹಿನಿ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಬರೀ ಊಹಾಪೋಹ ನಿಜವಲ್ಲ ಎಂದು ಹೇಳಲಾಗಿದೆ.