- ಕಾಲ್ಪನಿಕ ಕಥಾಹಂದರದ ಚಿತ್ರ “ಪೆನ್ ಡ್ರೈವ್” ಟೀಸರ್ ರಿಲೀಸ್
- ಮಾಲಾಶ್ರೀ, ತನಿಷಾ ಕುಪ್ಪಂಡ ಹಾಗೂ ಕಿಶನ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಚಿತ್ರ
- ಸಿನಿಮಾದ ನಿರ್ದೇಶನ ಮಾಡಿದಾರೆ ಸೆಬಾಸ್ಟಿನ್ ಡೇವಿಡ್
ಆರ್ ಹೆಚ್ ಎಂಟರ್ ಪ್ರೈಸಸ್ R H Enterprises ಮತ್ತು ಶ್ರೀತಿರುಮಲ ಸಿನಿ ಎಂಟರ್ಟೈನ್ಮೆಂಟ್ Shri Thirumala Cini Entertinement ಅರ್ಪಿಸುವ, ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ ಚಿತ್ರ “ಪೆನ್ ಡ್ರೈವ್” Pendrive. ಚಿತ್ರಕ್ಕೆ ಸೆಬಾಸ್ಟಿನ್ ಡೇವಿಡ್ Sebastin David ನಿರ್ದೇಶನವಿದ್ದು, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ Thanisha Kuppanda, ಕಿಶನ್ Kishan ಹಾಗೂ ಆಕ್ಷನ್ ಕ್ವೀನ್ ಮಾಲಾಶ್ರೀ Malashri ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಚಿತ್ರ ಇದಾಗಿದೆ. ಚಿತ್ರದ ಟೀಸರ್ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು Sa.Ra. Govindu ಅವರಿಂದ ಬಿಡುಗಡೆಯಾಯಿತು.
ಕಾಲ್ಪನಿಕ ಕಥಾಹಂದರದ ಚಿತ್ರ
ಒಂದೇ ಹಂತದಲ್ಲಿ ಚಿತ್ರದ ಚಿತ್ರೀಕರಣ ಮುಕ್ತಾಯಗೊಳಿಸಲಾಗಿದ್ದು, ಇದೊಂದು ಕಾಲ್ಪನಿಕ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ಟ್ರೇಲರ್ ಹಾಗೂ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪೆನ್ಡ್ರೈವ್ ಪ್ರಕರಣಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ನಿರ್ದೇಶಕರು. ಜಿ.ವೆಂಕಟೇಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ನಾಗೇಶ್ ಅವರ ಸಹ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ಡಾ||ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ, ಸಂಜನಾ ನಾಯ್ಡು, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ.