- ಮಹಿಳಾ ಪ್ರಧಾನ ತುಳು ಚಿತ್ರ “ಮೀರಾ” ಬಿಡುಗಡೆಗೆ ಸಿದ್ಧ
- ಅಸ್ತ್ರ ಪ್ರೊಡಕ್ಷನ್ ನವರ ಚೊಚ್ಚಲ ಚಿತ್ರ “ಮೀರಾ” ಫೆ. 21 ಕ್ಕೆ ಬಿಡುಗಡೆ
- ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇಶಿತಾ ಶೆಟ್ಟಿ
ಒಬ್ಬ ಮಹಿಳೆ ತನ್ನ ಕನಸುಗಳನ್ನು ಸಾಧಿಸುವ ಹಾದಿಯಲ್ಲಿ ಸಮಾಜದಲ್ಲಿ ಅನುಭವಿಸುವ ಕಷ್ಟಗಳು, ಸವಾಲುಗಳು ಹಾಗೂ ಆ ಸವಾಲುಗಳನ್ನು ಆಕೆ ಮೆಟ್ಟಿ ನಿಂತು ಗೆಲ್ಲುವ ಪರಿಯನ್ನು ಕಥಾಹಂದರವಾಗಿ ಹೊಂದಿರುವ ಮಹಿಳಾ ಪಾತ್ರ ಪ್ರಧಾನ ತುಳು ಚಿತ್ರ “ಮೀರಾ” Meera Tulu Movie ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುವಂತಹಾ ಉತ್ತಮ ಚಿತ್ರ ಇದೇ ಫೆ.21 ರಂದು ತೆರೆ ಮೇಲೆ ಬರಲಿದೆ.
ಈ ಚಿತ್ರವನ್ನು ಲಂಚುಲಾಲ್ ಕೆ ಎಸ್ ನಿರ್ಮಿಸಿದ್ದು, ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳೆ ಮತ್ತು ಕರಾವಳಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ “ಮೀರಾ” ತುಳು ಚಿತ್ರರಂಗದಲ್ಲೊಂದು ಮಹತ್ವದ ಮೈಲಿಗಲ್ಲು ಮೂಡಿಸಲಿದೆ ಎಂಬ ಭರವಸೆ ಹೊಂದಿದೆ.

ಚಿತ್ರದ ಯಶಸ್ಸಿನ ಹಿಂದಿದೆ ಇವರ ಕೈಚಳಕ
ಚಿತ್ರದಲ್ಲಿ ಇಶಿತಾ ಶೆಟ್ಟಿ Ishitha shetty ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವೋರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್, ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಒಪಿ ಅಜಯ್ ಕೆ.ಎಸ್., ಸಂಕಲನ ಜಾಬಿನ್ಸ್ ಸಬಾಸ್ಟಿಯನ್ ನಿರ್ವಹಿಸುತ್ತಿದ್ದು, ಸಂಗೀತ ಸಂಯೋಜನೆ ರೆನ್ನು ಜಯಪ್ರಕಾಶ್, ಗೀತೆ ರಚನೆ ಜಯಪ್ರಕಾಶ್ ಕಳೇರಿ ನಿರ್ವಹಿಸುತ್ತಿದ್ದಾರೆ. ಮಲಯಾಳಂ ಸಿನೆಮಾ “ಭ್ರಮಯುಗಂ” ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
ಎಸ್.ಎಫ್.ಎಕ್ಸ್ ಮತ್ತು ಅಂತಿಮ ಮಿಶ್ರಣವನ್ನು ಯುನಿಟಿ ಸ್ಟುಡಿಯೋಸ್ ನಿರ್ವಹಿಸಿದ್ದು, ಜಿತಿನ್ ಕುಂಬ್ಳೆ ಸಹಾಯಕ ನಿರ್ದೇಶಕರಾಗಿ, ಜಯ ಸುವರ್ಣ ಮೇಕಪ್ ಹಾಗೂ ಪಿ.ಆರ್.ಒ ಆಗಿ ಬಾಳ ಜಗನ್ನಾಥ ಶೆಟ್ಟಿ ಉಸ್ತುವಾರಿ ವಹಿಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ದಕ್ಷಿಣ ಭಾರತ ಹೆಸರಾಂತ ಹಿನ್ನೆಲೆ ಗಾಯಕರಾದ ಮಧುಬಾಲಕೃಷ್ಣ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿದೆ. ತುಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಎಐ ತಂತ್ರಜ್ಞಾನದಲ್ಲಿ ಸ್ವರ ತಯಾರಿಸಿದ ಹಾಡು ಈ ಚಿತ್ರದಲ್ಲಿದೆ.